ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ (Mysuru Dasara) ಆಗಮಿಸಿರುವ ವಿದೇಶಿ ಗಣ್ಯರಿಗೆ ಸಚಿವ ಬಸವರಾಜ್ ರಾಯರೆಡ್ಡಿ (Basavaraj Rayarededy ಸ್ವಾಗತ ಕೋರಿದರು.
ವಿದೇಶಿ ಗಣ್ಯರಾದ ಯುರೋಪಿಯನ್ ರಾಯಭಾರಿ ಜೆನ್ ಎರಿಕ್ ಪಾಕ್ವೆಟ್, ಚೀನಾ ರಾಯಭಾರಿ ಕ್ಸುಪೆಹೋಂಗ್, ಎಕ್ಯುಡಾರ್ನ ಪರ್ನಾಂಡೋ ಬುಚಿಲ್, ಮೊಜಾಂಬಿಕ್ನ ಹೈಕಮಿಷನರ್ ಅರ್ಮಾಂಡೋ ಪೆಡ್ರೊ, ಬಲ್ಗೇರಿಯಾ ರಾಯಭಾರಿ ನಿಕೊಲಾಯ್ ಯನ್ಕೋ, ಬ್ರಿಟಿಷ್ ಹೈಕಮಿಷನರ್ ಹರ್ಷಬೀರ್ ಸಂಘಾ, ಡೆನ್ಮಾರ್ಕ್ ಕಾನ್ಸುಲೇಟ್ ಜನರಲ್ ಪೀಟರ್ ವಿಂಥರ್, ಇಸ್ರೇಲ್ ಕಾನ್ಸುಲೇಟ್ ಜನರಲ್ ಒರ್ಲಿ ವೇಟ್ಜಮನ್, ರಿಪಬ್ಲಿಕ್ ಆಪ್ ಅರ್ಮೇನಿಯಾದ ಮರತ್ ಮೆಲಿಕ್ಯಾನ್, ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಸ್ಟೀವನ್ ಕೊಲೊನಿ ಅವರನ್ನು ಸಚಿವರು ಹೂಗುಚ್ಛ ನೀಡಿ ಬರಮಾಡಿಕೊಂಡರು.
ಕರ್ನಾಟಕದ ಇತಿಹಾಸ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ವಿದೇಶಿ ಗಣ್ಯರಿಗೆ ಮಾಹಿತಿ ನೀಡಿದರು. ಮೈಸೂರು ರಾಜ ಮನೆತನದ ಇತಿಹಾಸ, ಶ್ರೇಷ್ಠತೆ ಮತ್ತು ದಸರಾದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು. ಮೈಸೂರು ದಸರಾ ನಡೆದುಬಂದ ಅವಲೋಕನ ಮಾಡಿದ ರಾಯರೆಡ್ಡಿ, ನಾಡದೇವತೆ ಶ್ರೀ ಚಾಮುಂಡೇಶ್ವರಿಯ ಬಗ್ಗೆ ಜನರ ಭಕ್ತಿ, ಶ್ರದ್ಧೆ, ದಸರಾ ಪೂರ್ವ ಸಿದ್ಧತೆ, ಅಂಬಾರಿಯ ಮಹತ್ವ, ದಸರಾ ಆಚರಣೆಯ ವಿಶೇಷತೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
