ಗದಗ: ಮಹಾರಾಷ್ಟ್ರ (Maharashtra) ರಾಜ್ಯದ ಸೊಲ್ಲಾಪುರದಿಂದ ಗದಗಕ್ಕೆ ಗಾಂಜಾ (Ganja Supply) ಪೂರೈಕೆ ಮಾಡುತ್ತಿದ್ದವರ ಜಾಲ ಪತ್ತೆಯಾಗಿದೆ. ಗದಗ ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ನಾಲ್ವರು ಗಾಂಜಾ ಪೆಡ್ಲರ್ಗಳ ಬಂಧನವಾಗಿದೆ.
ಪ್ರಕರಣದಲ್ಲಿ ಬಾಷಾಸಾಬ್ ಬುವಾಜಿ (26), ಮಂಜುನಾಥ ಜಾದಾವ್ (33), ಆಕಾಶ ಕಡಕಕೇರ್(23), ರವಿ ಕಡಕಕೇರ್(20) ಎಂಬುವರ ಬಂಧನವಾಗಿದೆ. ಈ ನಾಲ್ವರಲ್ಲಿ ಇಬ್ಬರು ಸ್ಥಳೀಯರು, ಇನ್ನಿಬ್ಬರು ಮಹಾರಾಷ್ಟ್ರದ ಸೊಲ್ಲಾಪುರ ಮೂಲದವರು.
ಗದಗ ನಗರದ ಗಂಗಿಮಡಿ ಹೊಸ ಅಪಾರ್ಟ್ಮೆಂಟ್ ಬಳಿ ಗಾಂಜಾ ಮಾರಾಟ ವೇಳೆ ಪೊಲೀಸ್ ದಾಳಿ ನಡೆಸಿದ್ದಾರೆ. ಬಂಧಿತರಿಂದ 1.17 ಲಕ್ಷ ಮೌಲ್ಯದ 2 ಕೆ.ಜಿ. 341 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರದಿಂದ ಗಾಂಜಾ ತಂದು ಸಣ್ಣ ಪ್ಯಾಕೆಟ್ಗಳಾಗಿ ಮಾಡಿ ಮಾರಾಟ ಮಾಡುತ್ತಿದ್ದರು. ಚಿಕ್ಕ ಪ್ಯಾಕೆಟ್ಗಳನ್ನು 300 ರೂ. 500 ರೂ.ವರೆಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.ಇದನ್ನೂ ಓದಿ: 137 ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ – ನ.9 ರಿಂದಲೇ ಪರಿಷ್ಕೃತ ದರ ಜಾರಿ
ಈ ವೇಳೆ ಗಾಂಜಾ ಹಾಗೂ ಮಾರಾಟಕ್ಕೆ ಬಳಸುತ್ತಿದ್ದ ತೂಕದ ಯಂತ್ರ, ಅನೇಕ ಪ್ಯಾಕೆಟ್ಗಳು, ಮೊಬೈಲ್, 1,200 ನಗದು ಜಪ್ತಿ ಮಾಡಲಾಗಿದೆ. ಗಾಂಜಾ ಪೂರೈಕೆ ಜಾಲದ ಬಗ್ಗೆ ಪೊಲೀಸರು ಬೆನ್ನತ್ತಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಗರ್ಬಾ ನೃತ್ಯದಿಂದ ಬಾಲಕಿಯನ್ನು ಹೊರಗೆ ತಳ್ಳಿದ ಬಿಜೆಪಿ ನಾಯಕ – ಪೋಕ್ಸೋ ಪ್ರಕರಣ ದಾಖಲು
