-ಮಾದಕವಸ್ತು ಪ್ರಕರಣದಲ್ಲಿಯೇ ಜೈಲು ಸೇರಿದ್ದ ಪ್ರಿಯಕರ
ಅಮರಾವತಿ: ಮಾದಕ ವಸ್ತು ಸಂಬಂಧಿತ ಪ್ರಕರಣದಲ್ಲಿ ಜೈಲು ಸೇರಿದ್ದ ಪ್ರಿಯಕರನ ಜಾಮೀನಿಗೆ ಹಣ ಹೊಂದಿಸಲು ಮಾದಕ ವಸ್ತು ಸಾಗಿಸುತ್ತಿದ್ದ ಪ್ರಿಯತಮೆಯನ್ನು ಪೊಲೀಸರು ಬಂಧಿಸಿರುವ ಆಂಧ್ರಪ್ರದೇಶದ (Andhra Pradesh) ವಿಜಯವಾಡದಲ್ಲಿ (Vijayawada) ನಡೆದಿದೆ.
ಬಂಧಿತ ಆರೋಪಿಯನ್ನು ನಾಗ ಸೌಮ್ಯ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ನ.1ರಿಂದ ಅಪರಿಚಿತ ಕರೆ ಮಾಡಿದವರ ಹೆಸರೂ ಮೊಬೈಲ್ನಲ್ಲಿ ಪ್ರದರ್ಶನ
ಮೂರು ತಿಂಗಳ ಹಿಂದೆ ಚಿತ್ತೂರಿನಲ್ಲಿ (Chittur) ಮಾದಕವಸ್ತು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಾಗ ಸೌಮ್ಯಳ ಪ್ರಿಯಕರನನ್ನು ಬಂಧಿಸಲಾಗಿತ್ತು. ಅವನ ಜಾಮೀನಿಗಾಗಿ ಹಣ ಹೊಂದಿಸುವ ಸಲುವಾಗಿ, ನಾಗ ಸೌಮ್ಯ ಮಾದಕವಸ್ತು ಸಾಗಿಸುವ ಕೆಲಸ ಮಾಡಲು ಒಪ್ಪಿಕೊಂಡಿದ್ದು, ಬಶೀರ್ ಎಂಬ ವ್ಯಕ್ತಿ ಈ ಕೆಲಸಕ್ಕಾಗಿ ಆಕೆಗೆ 50,000 ರೂ. ನೀಡುವುದಾಗಿ ಆಮಿಷವೊಡ್ಡಿದ್ದ. ಬೆಂಗಳೂರಿನಿಂದ (Bengaluru) ವಿಜಯವಾಡಕ್ಕೆ ಮಾದಕ ವಸ್ತುಗಳನ್ನು ಸುರಕ್ಷಿತವಾಗಿ ತಲುಪಿಸಿದರೆ ಹಣ ನೀಡುವುದಾಗಿ ಬಶೀರ್ ಭರವಸೆ ನೀಡಿದ್ದ.
ಸುಲಭವಾಗಿ ಹಣ ಗಳಿಸಬಹುದು ಎಂಬ ಆಸೆಗೆ ಬಿದ್ದು ನಾಗ ಸೌಮ್ಯ ಈ ಕೆಲಸವನ್ನು ಒಪ್ಪಿಕೊಂಡಿದ್ದಳು. ಅದರಂತೆ ಸೌಮ್ಯ ಬೆಂಗಳೂರಿನಿಂದ ವಿಜಯವಾಡಕ್ಕೆ ಸುಮಾರು 110 ಗ್ರಾಂ ಎಂಡಿಎಂಎ ಸಾಗಿಸುತ್ತಿದ್ದಳು. ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿದ್ದು, ವಿಜಯವಾಡ ರೈಲು ನಿಲ್ದಾಣದಲ್ಲಿ ಕಣ್ಗಾವಲು ಇರಿಸಿದ್ದ ಪೊಲೀಸರು, ಆಕೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದಾಗ ಬಂಧಿಸಿದ್ದಾರೆ.
ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಬಶೀರ್ನ ಪಾತ್ರವಿರುವುದು ಬೆಳಕಿಗೆ ಬಂದಿದ್ದು, ಬಶೀರ್ನನ್ನೂ ಪೊಲೀಸರು ಬಂಧಿಸಿದ್ದಾರೆ. ಇನ್ನು ಬಶೀರ್ನ ಚಟುವಟಿಕೆಗಳ ತನಿಖೆಯ ವೇಳೆ ಮತ್ತೊಂದು ಗಂಭೀರ ವಿಷಯ ಬೆಳಕಿಗೆ ಬಂದಿದ್ದು, ಕಾಲೇಜುಗಳನ್ನು ಗುರಿಯಾಗಿಸಿಕೊಂಡು, ವಿದ್ಯಾರ್ಥಿಗಳ ಮೂಲಕ ಮಾದಕವಸ್ತುಗಳನ್ನು ಮಾರಾಟ ಮಾಡಿಸುತ್ತಿದ್ದನೆಂದು ಆರೋಪಿಸಲಾಗಿದೆ.ಇದನ್ನೂ ಓದಿ: Pakistan | ಶಾಲಾ ಮೇಲ್ಛಾವಣಿ ಕುಸಿದು 21 ಮಕ್ಕಳ ದುರಂತ ಅಂತ್ಯ – ಶಿಕ್ಷಕಿಯೂ ಸಾವು

