– ಸಿನಿಮಾ ಮಾಡುವ ಕನಸಿದೆ
ಬಿಗ್ ಬಾಸ್ ಮನೆಗೆ ಮತ್ತೆ ಅವಕಾಶ ಸಿಕ್ಕರೆ ಧಗಧಗ ಅನ್ನಿಸುತ್ತೀನಿ ಅಂತಾ ಮಡರ್ನ್ ಮಹಾಕವಿ ಮಂಜ (Modern Mahakavi Manja) ಹೇಳಿದ್ದಾರೆ.
ಬಿಗ್ಬಾಸ್ ಮನೆಯಿಂದ ಕಳೆದ ವಾರ ಔಟಾದ ಮಂಜ ʻಪಬ್ಲಿಕ್ ಟಿವಿʼ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಬಿಗ್ ಬಾಸ್ನಲ್ಲಿ ಮತ್ತೆ ಅವಕಾಶ ಸಿಕ್ಕರೆ ನನ್ನ ಆಟವೇ ಬೇರೆ ಇರುತ್ತೆ, ಮತ್ತೆ ಅವಕಾಶ ಸಿಕ್ಕರೆ ಧಗಧಗ ಅನ್ನಿಸ್ತೀನಿ ಎಂದಿದ್ದಾರೆ ಮಂಜ.
ನನ್ನ ಸಾಮರ್ಥ್ಯ ಹಾಗೂ ದೌರ್ಬಲ್ಯ ಎರಡೂ ತಮ್ಮ ಮಾತುಗಳೇ. ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ನನ್ನ ಹುಟ್ಟುಹಬ್ಬದ ದಿನವೇ ಮನೆಯಿಂದ ಹೊರಬಂದಿದ್ದರೂ ಅದನ್ನು ಹೊಸ ಜೀವನದ ಆರಂಭ ಎಂದು ಭಾವಿಸುತ್ತೇನೆ. ಕೆಲವೊಮ್ಮೆ ತಪ್ಪುಗಳನ್ನು ಮಾಡಿ ಪಾಠ ಕಲಿಯುತ್ತೇವೆ, ಅದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

ಸಿನಿಮಾ ಮಾಡುವ ಕನಸು ಇದೆ
ನಾನು ಯಾರನ್ನೂ ನೋಡಿ ಅವರಂತೆ ಇರಬೇಕು ಎಂದು ಬಿಗ್ ಬಾಸ್ಗೆ ಹೋಗಿರಲಿಲ್ಲ. ಸುದೀಪ್ ಸರ್ ಶೀಘ್ರದಲ್ಲೇ ಒಳ್ಳೆಯ ಅವಕಾಶ ಕೊಡುತ್ತಾರೆ ಎಂಬ ನಿರೀಕ್ಷೆಯಿದೆ. ಮುಂದೆ ಈ ಬಗ್ಗೆ ಮಾತನಾಡುತ್ತೇನೆ ಎಂದು ಮಂಜ ಹೇಳಿದ್ದಾರೆ. ಮಹಿಳೆಯರೂ ನನ್ನನ್ನ ಇಷ್ಟಪಡುತ್ತಿದ್ದಾರೆ ಎಂದಿದ್ದಾರೆ.
ಇನ್ನೂ ನನಗೆ ಸಿನಿಮಾ ಮಾಡುವ ಕನಸಿದೆ ಎಂದು ಹೇಳಿರುವ ಮಂಜ, ಬಿಕಾಂ ಓದುತ್ತಿದ್ದಾಗ ಹಣದ ಕೊರತೆಯಿಂದ ಶಿಕ್ಷಣವನ್ನ ಅರ್ಧಕ್ಕೆ ನಿಲ್ಲಿಸಿದೆ. ಬಿಗ್ ಬಾಸ್ಗೆ ಬರುವುದಕ್ಕೂ ಮೊದಲು ಜೀವನದಲ್ಲಿ ಎಲ್ಲ ರೀತಿಯ ಕೆಲಸಗಳನ್ನೂ ಮಾಡಿದ್ದೇನೆ ಎನ್ನುತ್ತಾರೆ ಮಂಜ.

