ಬೆಂಗಳೂರು: ಪದವಿ ಕಾಲೇಜು ಉಪನ್ಯಾಸಕರ ಅರ್ಹತಾ ಪರೀಕ್ಷೆಯಾದ ಕೆ-ಸೆಟ್-2026 (K-Set) ಪರೀಕ್ಷೆ ಇಂದು (ಅ.11) ಯಶಸ್ವಿಯಾಗಿ ನಡೆದಿದೆ.
ಒಟ್ಟು 37 ವಿವಿಧ ವಿಷಯಗಳಿಗೆ ನಡೆದ ಕೆ-ಸೆಟ್ಗೆ ಅರ್ಜಿ ಸಲ್ಲಿಸಿದ್ದ 1,29,212 ಮಂದಿ ಪೈಕಿ 1,17,017 (ಶೇ.91ರಷ್ಟು) ಮಂದಿ ಹಾಜರಾಗಿದ್ದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ (Karnataka Examination Authority) ನಿರ್ದೇಶಕ ಹೆಚ್.ಪ್ರಸನ್ನ (H.Prasanna) ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ 2026: ಮೈತಳೆದ 40 ಅಡಿ ಎತ್ತರದ ಭವ್ಯ `ಕೃಷ್ಣಾರ್ಜುನ ರಥ’
ಒಟ್ಟು 11 ಜಿಲ್ಲೆಗಳ 326 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಕೆಇಎ ಕಚೇರಿಯಲ್ಲಿ ಸ್ಥಾಪಿಸಿದ್ದ ಕಮಾಂಡ್ ಸೆಂಟರ್ ಮೂಲಕ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡುವ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಒಎಂಆರ್ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಕೂಡ ಆರಂಭವಾಗಿದ್ದು, ಹಂತ ಹಂತವಾಗಿ ವೆಬ್ಸೈಟ್ಗೆ ಅಪ್ ಲೋಡ್ ಮಾಡುವ ಕೆಲಸವನ್ನೂ ಮಾಡಲಾಗುತ್ತಿದೆ. ಕೆಇಎ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ, ಪರೀಕ್ಷಾ ನಿಯಂತ್ರಕಿ ಅರ್ಚನಾ ಅವರು ಖುದ್ದು ಕಮಾಂಡ್ ಸೆಂಟರ್ನಲ್ಲಿ ಇದ್ದು ಪರೀಕ್ಷಾ ಮೇಲ್ವಿಚಾರಣೆ ನಡೆಸಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ 2026: ಮೈತಳೆದ 40 ಅಡಿ ಎತ್ತರದ ಭವ್ಯ `ಕೃಷ್ಣಾರ್ಜುನ ರಥ’

