ಮುಂಬೈ: ಕಾಕ್ರೋಚ್ ಜನತಾ ಪಕ್ಷದ ( CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ (Abhijit Deepke) ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಕೆಲವೇ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಾವಿತ್ರಿಬಾಯಿ ಶಂಕರ್ ದೀಪ್ಕೆ (80) ಅವರು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಸಂತುಕ್ ಪಿಂಪ್ರಿ ಗ್ರಾಮದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
ಇನ್ನು ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಭಿಜಿತ್ ನೇತೃತ್ವದ CJP ಇಂದು ಬೃಹತ್ ಪ್ರತಿಭಟನೆಗೆ ಕರೆ ನೀಡಿತ್ತು. ಆದರೆ, ಆರಂಭದಲೇ ಈ ಪ್ರತಿಭಟನೆಗೆ ದೆಹಲಿ ಪೊಲೀಸ್ ನಿರ್ಬಂಧ ಹೇರಿತ್ತು. ನೀಟ್ ಅಕ್ರಮ ಖಂಡಿಸಿ ನಡೆದಿದ್ದ ಹೋರಾಟದಿಂದ ಆದಂತಹ ಅನಾಹುತಗಳು ಈ ಬಾರಿ ನಡೆಯಬಾರದೆಂದು ದೆಹಲಿ ಪೊಲೀಸರು ನಿನ್ನೆಯಿಂದಲೇ ಕಟ್ಟೆಚ್ಚರ ವಹಿಸಿದ್ದಾರೆ.
ಇಂದು ಪ್ರತಿಭಟನೆ ಪ್ರಾರಂಭವಾಗುವ ಮುನ್ನವೇ ದೆಹಲಿ ವಿಮಾನ ನಿಲ್ದಾಣದಲ್ಲಿ ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ತನ್ನ ಬದಲಾಗಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ 2026ಕ್ಕೆ ನಾಳೆ ಅಧಿಕೃತ ಚಾಲನೆ – ಚಾಮುಂಡಿ ಬೆಟ್ಟದಲ್ಲಿ ಭರದ ಸಿದ್ಧತೆ
ಛತ್ರಪತಿ ಸಂಭಾಜಿನಗರದಲ್ಲಿರುವ ಶಂಕರ್ ಸದನ್ ನಿವಾಸದಲ್ಲಿ ವಾಸಿಸುತ್ತಿರುವ ಅವರ ಪೋಷಕರು, ಸಾವಿತ್ರಿಬಾಯಿ ಅವರ ಮರಣದ ನಂತರ ಸಂತುಕ್ ಪಿಂಪ್ರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ.
ಭಾನುವಾರ ಬೆಳಿಗ್ಗೆ 9:30 ರಿಂದ 10 ಗಂಟೆಯ ನಡುವೆ ಸಾವಿತ್ರಿಬಾಯಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಅಭಿಜಿತ್ ದೀಪ್ಕೆ ಕೂಡ ತಮ್ಮ ಹುಟ್ಟೂರಿನಲ್ಲಿ ನಡೆಯುವ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.ಇದನ್ನೂ ಓದಿ: ಯಾರು, ಯಾರ ವಿರುದ್ಧ ಸ್ಟಿಂಗ್ ಮಾಡುತ್ತಾರೆ ಪಟ್ಟಿ ಬಿಡುಗಡೆ ಮಾಡಿ: ಗೋವಿಂದ ಕಾರಜೋಳ
ಪೊಲೀಸರು ಈಗಾಗಲೇ ಅಭಿಜಿತ್ ಅವರ ಅಜ್ಜಿಯ ನಿಧನದ ಬಗ್ಗೆ ಈಗಾಗಲೇ ಅವರಿಗೆ ತಿಳಿಸಿದ್ದಾರೆ. ಬಂಧನದಲ್ಲಿದ್ದಾಗ ಪ್ರತಿಭಟನೆ ಮುಂದುವರಿಸಬೇಕೆ ಅಥವಾ ಅಂತಿಮ ವಿಧಿವಿಧಾನಗಳಿಗಾಗಿ ಹಿಂತಿರುಗಬೇಕೆ ಎಂಬುದು ಈಗ ಅವರ ವಿವೇಚನೆಗೆ ಬಿಟ್ಟದ್ದು ಎಂದು X ನಲ್ಲಿ ದೆಹಲಿ ಪೊಲೀಸ್ಬ ಬರೆದುಕೊಂಡಿದೆ.

