ನವದೆಹಲಿ: ರಾಜಧಾನಿ ದೆಹಲಿ ಮೆಟ್ರೋ (Delhi Metro) ರೈಲುಗಳು ಮತ್ತು ನಿಜಾಮುದ್ದೀನ್, ನವದೆಹಲಿ ರೈಲ್ವೆ ನಿಲ್ದಾಣಗಳಿಗೆ ಬರುವ ರೈಲುಗಳ ಸಂಚಾರದ ಮೇಲೆ ಹೇರಲಾಗಿರುವ ಸಂಪೂರ್ಣ ನಿರ್ಬಂಧವನ್ನು ಪ್ರಶ್ನಿಸಿ ದೆಹಲಿ ಪೊಲೀಸರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ನ್ಯಾಯಾಂಗ ನಿಂದನೆ(Judicial Custody) ಅರ್ಜಿ ಸಲ್ಲಿಕೆಯಾಗಿದೆ.
ವಕೀಲರಾದ ಶೈಲೇಂದ್ರ ಮಣಿ ತ್ರಿಪಾಠಿ ಮತ್ತು ಚಾಂದ್ ಖುರೇಷಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾಯಾಲಯದ ಆದೇಶವಿದ್ದರೂ ದೆಹಲಿ ಪೊಲೀಸರು ಮೆಟ್ರೋ ನಿಲ್ದಾಣ ಮತ್ತು ರೈಲು ಸೇವೆಯ ಮೇಲೆ ನಿರ್ಬಂಧ ಹೇರಿದ್ದಾರೆ ಎಂದು ಅರ್ಜಿಯಲ್ಲಿ ದೂರಿದ್ದಾರೆ. ಇದನ್ನೂ ಓದಿ: CJP Protest Live Update| ವಿಮಾನದಲ್ಲೇ ದೀಪ್ಕೆ, ರಾಂಕಾ ವಶಕ್ಕೆ
ಸಾರಿಗೆ ಮಾರ್ಗಗಳನ್ನು ಉದ್ದೇಶಪೂರ್ವಕವಾಗಿ ಸಂಪೂರ್ಣ ಬಂದ್ ಮಾಡಿದ್ದಾರೆ. ಅನಗತ್ಯವಾಗಿ ರೈಲುಗಳನ್ನು ರದ್ದುಗೊಳಿಸಿದ್ದಾರೆ ಮತ್ತು ಪಾರದರ್ಶಕ ಸಂಚಾರ ಸಲಹೆಗಳನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಈ ಉದ್ದೇಶಪೂರ್ವಕ ಉಲ್ಲಂಘನೆಯು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಸಾರ್ವಜನಿಕ ಜೀವನವನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸಿದೆ, ಅಗತ್ಯ ಪ್ರಯಾಣಿಕರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಮೆಟ್ರೋ ರೈಲುಗಳ ಸಂಚಾರ ಹಾಗೂ ನಿಜಾಮುದ್ದೀನ್ ಮತ್ತು ನವದೆಹಲಿ ರೈಲ್ವೆ ನಿಲ್ದಾಣಗಳಿಗೆ ರೈಲುಗಳ ಆಗಮನದ ಮೇಲೆ ಸಂಪೂರ್ಣ ನಿರ್ಬಂಧ ಹೇರಿರುವುದು ಮಿತಿಮೀರಿದ ಕ್ರಮ. ಸರ್ಕಾರವು ನಿಯಂತ್ರಿತ ರೀತಿಯಲ್ಲಿ ರೈಲು ಸೇವೆಗಳು ಮತ್ತು ಮೆಟ್ರೋ ಸೇವೆಗಳನ್ನು ಮುಂದುವರಿಸಲು ಅನುಮತಿಸಬೇಕು ಎಂದು ಹೇಳಿತ್ತು.

