– ಕರ್ನಾಟಕಕ್ಕೆ ಐತಿಹಾಸಿಕ ದಿನ
ಬೆಂಗಳೂರು: 283 ಔಷಧಿಗಳ ದರ (Medicine Price) ಇಳಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ (UT Khader) ಹೇಳಿದ್ದಾರೆ.
ಕ್ಯಾನ್ಸರ್ ಔಷಧಿಗಳ ದರ 70% ಇಳಿಕೆಗೆ ಕೇಂದ್ರದಿಂದ ಸ್ಪಂದನೆ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಂದು ಕರ್ನಾಟಕ ರಾಜ್ಯಕ್ಕೆ ಐತಿಹಾಸಿಕ ದಿನ. ಏಕೆಂದರೆ ಚಿಕಿತ್ಸೆ ಪಡೆಯುವಾಗ ಆಗುವ ನೋವು, ಅದನ್ನ ಅರ್ಥ ಮಾಡಿಕೊಂಡು ಸಮಸ್ಯೆಗೆ ಪರಿಹಾರಕ್ಕಾಗಿ ಪತ್ರ ಬರೆದಿದ್ದೆವು. ಅದರ ಸಫಲತೆ ಸಿಕ್ಕಿದೆ. ಕ್ಯಾನ್ಸರ್ ಔಷಧಿಗೆ ಹೆಚ್ಚು ದರ ನಿಗದಿ ಮಾಡಿದ್ದರು ಅದಕ್ಕೆ ಪತ್ರ ಬರೆದಿದ್ದೆವು. ಕೇಂದ್ರಕ್ಕೆ ಪತ್ರ ಬರೆದ ಪರಿಣಾಮ ಕಡಿಮೆ ಮಾಡಲು ಮುಂದಾಗಿದೆ. 283 ಔಷಧಿಗಳ ದರ ಇಳಿಕೆಗೆ ಮುಂದಾಗಿದೆ. ಅಧಿಕಾರಿಗಳು ಪಟ್ಟ ಶ್ರಮಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ರಾಷ್ಟ್ರ ಮಟ್ಟದ ಮಾಧ್ಯಮಗಳು ತಾವು ಇದರ ಬಗ್ಗೆ ತೋರಿಸಿದ್ದಕ್ಕೆ ಇವತ್ತು ಯಶಸ್ಸು ಸಿಕ್ಕಿದೆ ಎಂದರು. ಇದನ್ನೂ ಓದಿ: ಗದಗ | ಲಕ್ಕುಂಡಿ ಗ್ರಾಮ ಪಂಚಾಯತ ಮಾಜಿ ಸದಸ್ಯನ ಭೀಕರ ಕೊಲೆ
ಒಂದು ನಿರ್ಧಾರ ಮಾಡಿ ಕೇಂದ್ರ ಆರೋಗ್ಯ ಇಲಾಖೆಗೆ ಸೂಚಿಸಿದೆ. ಲಾಭಾಂಶ 30% ಒಳಗಡೆ ಇರಬೇಕು ಅಂತಾ ಸೂಚನೆ ನೀಡಿದೆ. ಇಲ್ಲಿಯ ತನಕ ಎಲ್ಲಾ ಔಷಧಿಗಳಲ್ಲಿ ಎಂಆರ್‌ಪಿ ಮಾತ್ರ ಇತ್ತು. ಇನ್ನುಮುಂದೆ ಉತ್ಪಾದನಾ ವೆಚ್ಚ ಎಷ್ಟು? ಮಾರಾಟ ವೆಚ್ಚ ಎಷ್ಟು? ಅಂತಾ ನಮೂದಿಸಬೇಕು ಅಂತಾ ತಿಳಿಸಿದೆ. ಆರೂವರೆ ಸಾವಿರ ಔಷಧಿ ಅರವತ್ತೈದು ಸಾವಿರ ಆಗುತ್ತಿತ್ತು. ಈ ದರ ಕಡಿಮೆ ಆಗುತ್ತೆ. ಸಾರ್ವಜನಿಕರ ಕಿಸೆಗೆ ಬೀಳುತ್ತಿದ್ದ ಹೊರೆ ಕಡಿಮೆ ಆಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ದೊಡ್ಮನೆಯಲ್ಲಿ ಬೀಪ್‌ಗಳದ್ದೇ ಸದ್ದು; ಮಂಜು ಜೊತೆ ಈ ಮೂರು ಸ್ಪರ್ಧಿಗಳಿಗೂ ಎಲಿಮಿನೇಷನ್ ಭೀತಿ
ರಾಷ್ಟ್ರ ಮಟ್ಟದಲ್ಲಿ ಇದು ಸರಿಯಾದ ರೀತಿಯಲ್ಲಿ ಅನುಷ್ಠಾನ ಆದರೆ ಜನ ಸಾಮಾನ್ಯರ ಜೇಬಿನಿಂದ ಖರ್ಚಾಗುವ 2 ಸಾವಿರ ಕೋಟಿ ಹಣ ಉಳಿತಾಯವಾಗಲಿದೆ. ಕ್ಯಾನ್ಸರ್ ಜೊತೆಗೆ ಹೈರಿಸ್ಕ್ ಕಾಯಿಲೆಗಳ ಔಷಧಿ ಮೇಲೆ ದರ ನಿಗದಿಗೆ ಅವಕಾಶ ನೀಡಬೇಕು. ಮೆಡಿಕಲ್ ಸಾಮಾಗ್ರಿಗಳಿಗೂ ದುಪ್ಪಟ್ಟು ಹಣ ತೆಗೆದುಕೊಳ್ಳುತ್ತಾರೆ. ಹೀಗಾಗಿ ಲಾಭಾಂಶದಲ್ಲಿ ಲಿಮಿಟ್ ತಂದರೆ ಬಹಳಷ್ಟು ಉಪಯೋಗವಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ ಎಎಸ್‌ಪಿ ಸಿ.ಇ.ತಿಮ್ಮಯ್ಯ ನಿಧನ

