BBK 13: ಬಿಗ್ ಬಾಸ್ ಕನ್ನಡ (Bigg Boss Kannada 13) ಮನೆಯಲ್ಲಿ ದಿನದಿಂದ ದಿನಕ್ಕೆ ಗಲಾಟೆಗಳು ಹೆಚ್ಚಾಗುತ್ತಿವೆ. ಸ್ಪರ್ಧಿಗಳ ನಡುವಿನ ವಾಗ್ವಾದ ಈಗ ಅವಾಚ್ಯ ಪದಗಳ ಬಳಕೆಯವರೆಗೂ ತಲುಪಿದೆ. ಮಂಜು, ಗಾನವಿ, ಗಗನ್ ಹಾಗೂ ಸೌಂದರ್ಯಾ ಮಾತಿನ ಭರದಲ್ಲಿ ಮಿತಿ ಮೀರಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ನಾಲ್ವರನ್ನು ಮನೆಯಿಂದ ಹೊರಹಾಕಬೇಕು ಎಂದು ಕೆಲ ವೀಕ್ಷಕರು ಆಗ್ರಹಿಸುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ವಕೀಲ ಜಗದೀಶ್ ಅವರ ವರ್ತನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಇತರ ಸ್ಪರ್ಧಿಗಳ ಜೊತೆಗಿನ ವಾಗ್ವಾದ, ಅಸಭ್ಯ ವರ್ತನೆ ಮತ್ತು ನಿಯಮ ಉಲ್ಲಂಘನೆಯ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. ಇದೀಗ ಮನೆಯೊಳಗೆ ಮತ್ತೆ ಇಂತಹ ಬೆಳವಣಿಗೆಗಳು ನಡೆಯುತ್ತಿರುವುದರಿಂದ ಜಗದೀಶ್ ಪ್ರಕರಣವನ್ನು ವೀಕ್ಷಕರು ನೆನಪಿಸಿಕೊಳ್ಳುತ್ತಿದ್ದಾರೆ.
ನಾಲ್ವರು ಸ್ಪರ್ಧಿಗಳ ಮಾತಿಗೆ ಬೀಪ್
ಇತ್ತೀಚಿನ ಗಲಾಟೆಗಳ ವೇಳೆ ಮಂಜು, ಗಾನವಿ, ಗಗನ್ ಹಾಗೂ ಸೌಂದರ್ಯಾ ಬಳಸಿದ ಕೆಲವು ಪದಗಳಿಗೆ ಪ್ರಸಾರದ ಸಂದರ್ಭದಲ್ಲಿ ‘ಬೀಪ್’ ಹಾಕಲಾಗಿದೆ ಎನ್ನಲಾಗಿದೆ. ಕುಟುಂಬದವರ ವಿಚಾರವಾಗಿ ಮಾತಿನ ಚಕಮಕಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ವಾಗ್ವಾದ ಮತ್ತು ಕಳಪೆ ಪ್ರಕ್ರಿಯೆ ವಿಚಾರವಾಗಿ ನಡೆದ ಗಲಾಟೆಗಳು ಮನೆಯ ವಾತಾವರಣವನ್ನು ಮತ್ತಷ್ಟು ಬಿಸಿಯಾಗಿಸಿವೆ.
ವಾರಾಂತ್ಯದ ಪಂಚಾಯ್ತಿಯಲ್ಲಿ ನಿರೂಪಕ ಕಿಚ್ಚ ಸುದೀಪ್ ಈ ವಿಚಾರಗಳ ಬಗ್ಗೆ ಮಾತನಾಡುತ್ತಾರಾ ಎಂಬ ಕುತೂಹಲ ವೀಕ್ಷಕರಲ್ಲಿದೆ. ತಪ್ಪು ಮಾಡಿದ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರಾ ಅಥವಾ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.ಇದನ್ನೂ ಓದಿ: ಕಾಲ್ನೋವಿದ್ದರೂ ಕುಂಟುತ್ತಲೇ ಕಾದಾಡಿ ಕ್ಯಾಪ್ಟನ್ ಆದ ಧನುಷ್
ವಿಶೇಷವಾಗಿ ಮಂಜು ಅವರ ವರ್ತನೆ ಈಗ ಚರ್ಚೆಯ ಕೇಂದ್ರವಾಗಿದೆ. ಅವರು ಪದೇಪದೇ ಮಿತಿ ಮೀರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ, ಈ ವಾರ ಮಂಜುಗೆ ಗೇಟ್ಪಾಸ್ ಸಿಗುತ್ತಾ ಎಂಬ ಪ್ರಶ್ನೆಯೂ ಎದ್ದಿದೆ. ಆದರೆ, ಮಂಜು ಅಥವಾ ಇತರ ಸ್ಪರ್ಧಿಗಳ ಎಲಿಮಿನೇಷನ್ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಇಂದಿನ ಸಂಚಿಕೆಯಲ್ಲಿ ಯಾರು ಸೇಫ್ ಆಗುತ್ತಾರೆ? ಯಾರಿಗೆ ಸುದೀಪ್ ಎಚ್ಚರಿಕೆ ನೀಡುತ್ತಾರೆ? ಮನೆಯೊಳಗಿನ ಗಲಾಟೆಗಳಿಗೆ ಯಾವ ರೀತಿಯ ಅಂತ್ಯ ಸಿಗಲಿದೆ? ಎಂಬುದನ್ನು ತಿಳಿಯಲು ಬಿಗ್ ಬಾಸ್ ವೀಕ್ಷಕರು ಕಾಯುತ್ತಿದ್ದಾರೆ.ಇದನ್ನೂ ಓದಿ: ‘ರಾಮರಸ’ ಮೋಷನ್ ಪೋಸ್ಟರ್ ರಿಲೀಸ್; ಡಿ. 11ಕ್ಕೆ ಸಿನಿಮಾ ತೆರೆಗೆ

