– ಪ್ರಸ್ತುತ 59.20 GW ಪವನ ವಿದ್ಯುತ್ ಉತ್ಪಾದನೆ ತಲುಪಿದ ಭಾರತ
– ಚೆನ್ನೈನಲ್ಲಿ ‘ವಿಂಡ್ ಎನರ್ಜಿ ಇಂಡಿಯಾ 2026’ಗೆ ಚಾಲನೆ
ನವದೆಹಲಿ: ಪವನ ವಿದ್ಯುತ್ ಉತ್ಪಾದನೆಯಲ್ಲಿ ಭಾರತ 2030ರ ವೇಳೆಗೆ 100 gw (ಗಿಗಾವ್ಯಾಟ್) ಸಾಮರ್ಥ್ಯ ಮೀರುವ ಹಾದಿಯಲ್ಲಿ ಮುನ್ನಡೆದಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದರು.
ಚೆನ್ನೈಯಲ್ಲಿ ಗುರುವಾರ, ‘ವಿಂಡ್ ಎನರ್ಜಿ ಇಂಡಿಯಾ 2026’ರ 8ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿ, ಭಾರತದ ಪವನ ವಿದ್ಯುತ್ ವಲಯವು ನಿರಂತರ ಬೆಳವಣಿಗೆಯ ಹೊಸ ಹಂತ ಪ್ರವೇಶಿಸುತ್ತಿದೆ. 2026ರ ಸೆಪ್ಟೆಂಬರ್ 30ರ ವೇಳೆಗೆ 59.20 GW ಸ್ಥಾಪಿತ ಸಾಮರ್ಥ್ಯ ಸಾಧಿಸಿದ್ದು, ಈ ಮೂಲಕ 2030ರ ಗುರಿಯತ್ತ ದೃಢವಾದ ಹೆಜ್ಜೆಯಿರಿಸಿದೆ. ಪವನ ಶಕ್ತಿ ಉತ್ಪಾದನೆ ಮತ್ತು ರಫ್ತುಗಳಲ್ಲಿ ಜಾಗತಿಕ ನಾಯಕತ್ವಕ್ಕೆ ಬಲವಾದ ಅಡಿಪಾಯ ಹಾಕುತ್ತಿದೆ ಎಂದು ಪ್ರತಿಪಾದಿಸಿದರು.
Addressed at the inauguration of the 8th Edition of Windergy India in Chennai in the presence of Shri @CTR_Nirmalkumar ji, Tamil Nadu’s Minister for Energy Resources and Law.
Under the visionary leadership of Hon’ble PM Shri @narendramodi Ji, India’s wind energy sector is entering a new phase of growth, driven by rising power demand, technological advancement, stronger domestic manufacturing and the integration of wind-solar-storage solutions.
India added a record 6+ GW of wind capacity last year and is working towards the ambitious target of 100 GW by 2030. With immense potential still untapped, the sector offers significant opportunities for investment, innovation, manufacturing and jobs, advancing the vision of #AatmanirbharBharat.
#Windergy2026 #WindergyIndia2026
— Pralhad Joshi (@JoshiPralhad) October 8, 2026
ಭಾರತದ ಪವನ ಶಕ್ತಿ ವಲಯವು ಬಲವಾದ ಆವೇಗವನ್ನ ಪ್ರದರ್ಶಿಸಿದ್ದು, 2026ರ ಹಣಕಾಸು ವರ್ಷದಲ್ಲಿ ಇದುವರೆಗಿನ ಅತ್ಯಧಿಕ ವಾರ್ಷಿಕ 6.05 GW ಸ್ಥಾಪನೆಯನ್ನು ಸಾಧಿಸಿದೆ. 2027ಕ್ಕೆ ಈ ದಾಖಲೆಯನ್ನೂ ಮೀರಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
20ಕ್ಕೂ ಹೆಚ್ಚು ರಾಷ್ಟ್ರಗಳು ಭಾಗಿ: ಚೆನ್ನೈಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ‘ವಿಂಡ್ ಎನರ್ಜಿ ಇಂಡಿಯಾ- 2026’ ಸಮಾವೇಷದಲ್ಲಿ ಡೆನ್ಮಾರ್ಕ್, ಜರ್ಮನಿ ಮತ್ತು ಸ್ಪೇನ್ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳನ್ನು ಪ್ರತಿನಿಧಿಸುವ ಸುಮಾರು 400 ಪ್ರದರ್ಶಕರು, 500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಇದೇ ವೇಳೆ ಪವನ ಶಕ್ತಿ ಉತ್ಪಾದನೆಯಲ್ಲಿ ವಿಶಿಷ್ಠ ಕೊಡುಗೆ ನೀಡಿದ ವಿವಿಧ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ಭಾರತೀಯ ಪವನ ವಲಯದಲ್ಲಿ ತಾಂತ್ರಿಕ ಪ್ರಗತಿ ಹೆಚ್ಚಿಸಲು IWTMA-BWE ಜಾಗತಿಕ ಒಪ್ಪಂದ, IWTMA-PTB LoI ಮತ್ತು IWTMA-OECD ಸಹಯೋಗ ಸೇರಿದಂತೆ ಪ್ರಮುಖ ಅಂತರಾಷ್ಟ್ರೀಯ ಮತ್ತು ದೇಶೀಯ ಒಪ್ಪಂದಗಳನ್ನು ಘೋಷಿಸಲಾಯಿತು.
ಸಮಾರಂಭದಲ್ಲಿ ತಮಿಳುನಾಡು ಸರ್ಕಾರದ ಇಂಧನ ಸಂಪನ್ಮೂಲಗಳು ಮತ್ತು ಕಾನೂನು ಸಚಿವ ತಿರು ಸಿಟಿಆರ್ ನಿರ್ಮಲ್ ಕುಮಾರ್, ಕೇಂದ್ರ ಹಾಗೂ ಅನೇಕ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು, ಪವನ ಶಕ್ತಿ ಸಂಘಗಳ ಪ್ರತಿನಿಧಿಗಳು ಮತ್ತು ಕೈಗಾರಿಕಾ ಮುಖಂಡರು ಉಪಸ್ಥಿತರಿದ್ದರು.

