ನವದೆಹಲಿ: 42 ನಿವೃತ್ತ ನ್ಯಾಯಾಧೀಶರ ಗುಂಪು ಒಂದು ಬಹಿರಂಗ ಪತ್ರ ಬರೆದಿದೆ. ಅದರಲ್ಲಿ ಚುನಾವಣಾ ಆಯೋಗ (Election Commission) ಮತ್ತು ಇತರ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಇಂತಹ ಪ್ರಯತ್ನಗಳು ಜನರ ನಂಬಿಕೆಯನ್ನು ನಾಶಮಾಡುತ್ತವೆ ಎಂದು ಎಚ್ಚರಿಸಿದ್ದಾರೆ.
ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಇತರ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ನಿರಂತರ ಪ್ರಯತ್ನಗಳ ಬಗ್ಗೆ ನಿವೃತ್ತ ನ್ಯಾಯಾಧೀಶರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ಪೂರಕ ಸಾಕ್ಷ್ಯಗಳಿಲ್ಲದೆ ಮಾಡಲಾದ ಮತ ಕಳ್ಳತನದ ಆರೋಪಗಳನ್ನು ಅವರು ಪ್ರಶ್ನಿಸಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನು ಪದೇ ಪದೇ ಕಳ್ಳರು ಮತ್ತು ರಾಜಿ ಮಾಡಿಕೊಂಡವರು ಎಂದು ಹಣೆಪಟ್ಟಿ ಕಟ್ಟುವ ವಿರುದ್ಧ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿ | ವಿಪಕ್ಷಗಳ ಪ್ರತಿಭಟನೆಯಲ್ಲಿ ಮೋದಿ ಪರ ಘೋಷಣೆ ಕೂಗಿದ ವ್ಯಕ್ತಿ ಮೇಲೆ ಹಲ್ಲೆ
ಇಂತಹ ಸಂದರ್ಭಗಳಲ್ಲಿ ಮೌನ ವಹಿಸುವುದು ಇನ್ಮುಂದೆ ತಟಸ್ಥ ಆಯ್ಕೆಯಾಗಿ ಉಳಿದಿಲ್ಲ ಎಂದು ನಾವು ಬರೆಯುತ್ತಿದ್ದೇವೆ. ನಮಗೆ ತೀವ್ರ ಕಳವಳವಿದೆ. ಭಾರತದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಭಾರತೀಯ ಚುನಾವಣಾ ಆಯೋಗವು ಈ ದಾಳಿಯ ಕೇಂದ್ರಬಿಂದುವಾಗಿದೆ. ನಾವೆಲ್ಲರೂ ಅತ್ಯುನ್ನತ ಗೌರವವನ್ನು ಹೊಂದಿರುವ ಉನ್ನತ ನ್ಯಾಯಾಂಗ ಮತ್ತು ಶಾಸನಬದ್ಧ ಸಂಸ್ಥೆಗಳನ್ನೂ ಸಹ ಇದರಲ್ಲಿ ಬಿಟ್ಟಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: SIR ವಿವಾದ | ವಿಜಯ್ಗೆ ಹೆದರುತ್ತಿದ್ದೀರಾ?- ರಾಹುಲ್ ಮೌನಕ್ಕೆ ಡಿಎಂಕೆ ಆಕ್ರೋಶ
ಇದು ರಾಜಕೀಯ ಹಿತಾಸಕ್ತಿಗಳಿಂದ ಪ್ರೇರಿತವಾದ ಹಾಗೂ ಪೂರ್ವಯೋಜಿತ ಅಭಿಯಾನದಂತಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವುದರಿಂದ ಉಂಟಾಗಬಹುದಾದ ವಿನಾಶಕಾರಿ ಪರಿಣಾಮಗಳ ಬಗ್ಗೆ ಇದರಲ್ಲಿ ಕಿಂಚಿತ್ತೂ ಗಮನ ಹರಿಸಲಾಗಿಲ್ಲ,” ಎಂದು ಅವರು ಬರೆದಿದ್ದಾರೆ.

