ಬೆಂಗಳೂರು: ಕರ್ನಾಟಕದ ಬಿಜೆಪಿ ನಾಯಕರು (BJP Leaders) ಫಾರ್ಮ್ 7 ಮೂಲಕ ಕುತಂತ್ರ ರಾಜಕೀಯ ಮಾಡಬಾರದು ಅಂತ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಎನ್ಡಿಎ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.
NDA ನಾಯಕರಿಂದ ರಾಜ್ಯಪಾಲರಿಗೆ ದೂರು ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕದ ಬಿಜೆಪಿ ನಾಯಕರು ಇಂತಹ ಕುತಂತ್ರ ರಾಜಕಾರಣ ಮಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲೆಕ್ಷನ್ ಗೆಲ್ಲಬೇಕು. ಚುನಾವಣೆ ಆಯೋಗ ಇಟ್ಟುಕೊಂಡು ವೋಟ್ ಶಫಲ್ ಮಾಡೋದು, ಬೇರೆ ಬೇರೆ ಬೂತ್ಗೆ ವೋಟ್ ಹಾಕಿಸೋದು, ದಲಿತರು, ಅಲ್ಪಸಂಖ್ಯಾತರು, ಬಡವರ ವೋಟ್ ಕಿತ್ತು ಹಾಕೋದು ಈ ಕೆಲಸ ಮಾಡ್ತಾ ಇದ್ದಾರೆ. ಇದು ನಾಚಿಕೆಗೇಡಿನ ವಿಚಾರ ಅಂತ ಕಿಡಿಕಾರಿದರು. ಇದನ್ನೂ ಓದಿ: ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ – ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ, ಜೆಡಿಎಸ್ ದೂರು
ಈಗ ಬಿಜೆಪಿ ಕಾರ್ಯಕರ್ತರನ್ನ ರಕ್ಷಣೆ ಮಾಡೋಕೆ ಹೋಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಮಾಯಕರು. ಗಂಡ, ಹೆಂಡತಿ, ಮಗ ಮೂರು ಜನ ಡಿಲೀಟ್ಗೆ ಕೊಟ್ಟಿದ್ದಾರೆ. ಮಾಧ್ಯಮಗಳೇ ಚೆಕ್ ಮಾಡಿವೆ. ಪಾಪ ಕಾರ್ಯಕರ್ತರು ಪೊಲೀಸ್ ಸ್ಟೇಷನ್ಗೆ ಹೋಗಿದ್ದಾರೆ. ರವಿ ಪಾಟೀಲ್ ಒಪ್ಪಿಕೊಂಡಿದ್ದಾರೆ. ಬಬಲೇಶ್ವರ, ಶೃಂಗೇರಿ, ಬಳ್ಳಾರಿ, ಜಯನಗರ ಸೇರಿ ಅನೇಕ ಕಡೆ ಹೀಗೆ ಆಗಿದೆ ಅಂತ ಒಪ್ಪಿಕೊಂಡಿದ್ದಾರೆ. ವಿಜಯೇಂದ್ರ ಅಶೋಕ್ ಅವರೇ 25 ಸಾವಿರ ಕೊಟ್ಟಿರಬಹುದು ಅಂತಾರೆ. ಆನೆ ಕದ್ದು ಕಳ್ಳ, ಅಡಿಕೆ ಕದ್ದರು ಕಳ್ಳ. ಈ ರೀತಿ ಮಾಡೋದು ಸರಿಯಲ್ಲ ಅಂತ ವಾಗ್ದಾಳಿ ನಡೆಸಿದರು.
ನಾನು ನಮ್ಮ ಜನರಿಗೆ ಜಾಗೃತಿ ಮೂಡಿಸೋ ಕೆಲಸ ಮಾಡ್ತಾ ಇದ್ದೇವೆ. ಒಬ್ಬ ಸಿಎಂ ಆಗಿ, ಪ್ರಜಾ ಪ್ರತಿನಿಧಿ ಆಗಿ ಜನರಿಗೆ ಮತ ಕೊಡಿಸೋ ಜವಾಬ್ದಾರಿ ನಮ್ಮದು ಮಾಡ್ತೀವಿ. ಅಧಿಕಾರ ದುರುಪಯೋಗ ಅಂತ ಆದ್ರು ಅವರು ತಿಳಿದುಕೊಳ್ಳಲಿ. ಏನಾದ್ರು ಹೇಳಿಕೊಳ್ಳಲಿ ಅಂತ ಬಿಜೆಪಿ-ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: 5 ವಿಧಾನಸಭಾ, 1 ಲೋಕಸಭಾ ಕ್ಷೇತ್ರಕ್ಕೆ ಮತದಾನ ಆರಂಭ

