ನಗೋಯಾ: ಜಪಾನ್ನ ನಗೋಯಾದ ಪಾರ್ಕ್ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್ಗೆ (Asian Games 2026) ಅದ್ದೂರಿ ತೆರೆ ಬಿದ್ದಿದೆ. 43 ವಿಭಾಗಗಳಲ್ಲಿ ಎರಡು ವಾರಕ್ಕೂ ಹೆಚ್ಚು ಕಾಲ ರೋಚಕ ಸ್ಪರ್ಧೆಗಳು ನಡೆದಿವೆ.
43 ವಿಭಾಗಗಳಲ್ಲಿ ಕ್ರೀಡಾಪಟುಗಳು ಕ್ರೀಡಾ ಪ್ರಾಬಲ್ಯ ಮೆರೆದಿದ್ದಾರೆ. ಹಲವು ದಾಖಲೆ, ಸ್ಮರಣೀಯ ಪ್ರದರ್ಶನಗಳಿಗೆ ಈ ಕ್ರೀಡಾಕೂಟ ಸಾಕ್ಷಿಯಾಗಿತ್ತು. ಭಾರತ ಈ ಬಾರಿ 21 ಚಿನ್ನ, 27 ಬೆಳ್ಳಿ, 37 ಕಂಚುಗಳೊಂದಿಗೆ 85 ಪದಕ ಗೆದ್ದು 4ನೇ ಸ್ಥಾನ ಪಡೆದಿದೆ.
ಚೀನಾ, ಜಪಾನ್, ದಕ್ಷಿಣ ಕೊರಿಯಾ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ಮುಂದಿನ 2030ರ ಏಷ್ಯನ್ ಗೇಮ್ಸ್ ಕತಾರ್ನ ದೋಹಾದಲ್ಲಿ ನಡೆಯಲಿದೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಹಿಳಾ ಹಾಕಿ ಟೀಂ

