ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರ (Doddagubbi Lake) ವ್ಯಾಪ್ತಿಯ ದೊಡ್ಡಗುಬ್ಬಿ ಕೆರೆಯಲ್ಲಿ ಮೀನುಗಳ ಮಾರಣಹೋಮವಾಗಿದೆ. 125 ಎಕರೆ ವಿಸ್ತೀರ್ಣದ ಕೆರೆಯಾದ್ಯಂತ ಏಕಾಏಕಿ ಸಾವಿರಾರು ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.
ಏಕಾಏಕಿ ಕೆರೆಯಲ್ಲಿನ ಮೀನುಗಳು ಸತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ನೀರಿನಲ್ಲಿ ಕೆಮಿಕಲ್ ಮಿಶ್ರಣದಿಂದ ಈ ಘಟನೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಪರಿಸರ ಮಾಲಿನ್ಯಾಧಿಕಾರಿಗಳು ಪ್ರತಿಕ್ರಿಯಿಸಿ, ಸಮರ್ಪಕವಾಗಿ ಸಂಸ್ಕರಿಸದ ಒಳಚರಂಡಿ ನೀರು ಕೆರೆಗೆ ಸೇರಿದಾಗ ಈ ಸಮಸ್ಯೆ ಉಂಟಾಗಬಹುದು. ಈ ರೀತಿಯ ಘಟನೆ ಸಾಮಾನ್ಯವಾಗಿ ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣ ಕುಸಿಯುವುದರಿಂದ ಉಂಟಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಟಿಪ್ಪರ್ ಡಿಕ್ಕಿಯಾಗಿ ಟೋಲ್ ಪ್ಲಾಜಾ ಸಂಪೂರ್ಣ ನಜ್ಜುಗುಜ್ಜು
ಕೆರೆಗೆ ಸೇರಿದ ಒಳಚರಂಡಿ ನೀರಿನಲ್ಲಿರುವ ಸಾವಯವ ವಸ್ತುಗಳು ಮತ್ತು ಪಾಚಿಗಳು ಕೊಳೆಯುವಾಗ, ಅದರಲ್ಲಿನ ಸೂಕ್ಷ್ಮಜೀವಿಗಳು ಹೆಚ್ಚಿನ ಪ್ರಮಾಣದಲ್ಲಿ ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು ಬಳಸಿಕೊಳ್ಳುತ್ತವೆ. ಇದರಿಂದ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗಿ ಮೀನುಗಳು ಸಾಯುವ ಸಾಧ್ಯತೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಗಣಪತಿ ಶೋಭಾಯಾತ್ರೆಯಲ್ಲಿ ಮುರಿದು ಬಿದ್ದ ಕಮಾನು – ವೃದ್ಧನಿಗೆ ಗಂಭೀರ ಗಾಯ

