ರಾಜ್ಯದಲ್ಲಿ ಮಳೆ ಕೊರತೆಯೊಂದಿಗೆ ಮುಂಗಾರು ಅಂತ್ಯವಾಗಿದ್ದು, ಬರ ತಾಂಡವ ಆಡುತ್ತಿದೆ. ಇದರೊಂದಿಗೆ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಂದು ಮಧ್ಯಾಹ್ನದ ನಂತರ ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಶಿವಮೊಗ್ಗ, ಚಿಕ್ಕಮಗಳೂರು, ಬೆಂಗಳೂರಿನ ಕೆಲವೆಡೆ ಸಂಜೆಯ ವೇಳೆಗೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.
ಬೆಂಗಳೂರಿನಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ 27 ಸೆಲ್ಸಿಯಸ್ ಹಾಗೂ ಕನಿಷ್ಠ 20 ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 31-25
ಶಿವಮೊಗ್ಗ: 30-22
ಬೆಳಗಾವಿ: 30-21
ಮೈಸೂರು: 31-22
ಮಂಡ್ಯ: 31-22
ಮಡಿಕೇರಿ: 27-20
ರಾಮನಗರ: 31-21
ಹಾಸನ: 28-20
ಚಾಮರಾಜನಗರ: 30-22
ಚಿಕ್ಕಬಳ್ಳಾಪುರ: 28-20

ಕೋಲಾರ: 30-21
ತುಮಕೂರು: 31-21
ಉಡುಪಿ: 32-25
ಕಾರವಾರ: 31-27
ಚಿಕ್ಕಮಗಳೂರು: 27-19
ದಾವಣಗೆರೆ: 33-22
ಹುಬ್ಬಳ್ಳಿ: 32-22
ಚಿತ್ರದುರ್ಗ: 32-22
ಹಾವೇರಿ: 33-22
ಬಳ್ಳಾರಿ: 34-24
ಗದಗ: 32-22
ಕೊಪ್ಪಳ: 33-23

ರಾಯಚೂರು: 35-24
ಯಾದಗಿರಿ: 35-25
ವಿಜಯಪುರ: 34-23
ಕಲಬುರಗಿ: 34-23
ಬಾಗಲಕೋಟೆ: 33-23

