ಬೆಂಗಳೂರು: ಭಾರತೀಯ ಚಿತ್ರರಂಗದ ಮಾಣಿಕ್ಯ ಸಿಂಗೀತಂ ಶ್ರೀನಿವಾಸ (Singeetham Srinivasa Rao) ಅವರ ಅಗಲಿಕೆಯಿಂದ ದುಃಖಿತನಾಗಿದ್ದು, ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಅವರು, ಅತ್ಯುತ್ತಮ ಚಿತ್ರಗಳ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಸಿಂಗೀತಂ ಶ್ರೀನಿವಾಸ ಅವರು, ಡಾ. ರಾಜಕುಮಾರ್ ಅಭಿನಯದ, `ಹಾಲುಜೇನು’, `ಚಲಿಸುವ ಮೋಡಗಳು’, `ಶ್ರಾವಣ ಬಂತು’ ಮುಂತಾದ ಸದಭಿರುಚಿಯ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದರು ಎಂದು ಸ್ಮರಿಸಿದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಡ್ರೋನ್ ದಾಳಿ – ಭಾರತೀಯ ಮಾಲೀಕತ್ವದ ಔಷಧ ಘಟಕ ಧ್ವಂಸ, ಓರ್ವ ಸಾವು

ಸಿಂಗೀತಂ ಅವರ `ಪುಷ್ಪಕ ವಿಮಾನ’ ಮೂಕಿ ಚಿತ್ರ ಭಾರತೀಯ ಚಿತ್ರರಂಗದ ಮೈಲಿಗಲ್ಲು. ಅವರ ಅನನ್ಯ ಪ್ರತಿಭೆಗೆ ಸಾಕ್ಷಿ. ಕನ್ನಡ ಚಿತ್ರರಂಗದ ಜೊತೆ ಒಡನಾಟ ಇಟ್ಟುಕೊಂಡಿದ್ದ ಸಿಂಗೀತಂ, ತಮ್ಮ ಕೊನೆ ಉಸಿರು ಇರುವ ತನಕ ಸಿನಿಮಾ ಧ್ಯಾನ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಸಿಎಂ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ: ವಿಜಯೇಂದ್ರ ಕಿಡಿ
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಭಿಮಾನಿಗಳು ಹಾಗೂ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಿಎಂ ಡಿಕೆಶಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: CEC ಜ್ಞಾನೇಶ್ ಕುಮಾರ್ ವಿರುದ್ಧ ʻಕೈʼ ಸರ್ಕಾರದ ತನಿಖೆ – 20 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ..!


