ಖ್ಯಾತ ಸಿನಿಮಾ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ (Singeetham Srinivasa Rao) ಅವರು ನಿಧನರಾಗಿದ್ದಾರೆ. ಇವರು ‘ಆನಂದ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಶಿವಣ್ಣ ಅವರನ್ನು ಪರಿಚಯಿಸಿದ್ದರು.
ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕನ್ನಡದ ‘ಹಾಲು ಜೇನು’, ‘ದೇವತಾ ಮನುಷ್ಯ’, ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ ಸೇರಿ 60ಕ್ಕೂ ಅಧಿಕ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸುಮಾರು 6 ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಸಿಂಗೀತಂ ಶ್ರೀನಿವಾಸ ರಾವ್ ಅವರು ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ. ಇದನ್ನೂ ಓದಿ: ಫಾದರ್ ರಿಲೀಸ್ ಡೇಟ್ ಫಿಕ್ಸ್ – ಮತ್ತೆ ಮೋಡಿ ಮಾಡೋಕೆ ಡಾರ್ಲಿಂಗ್ ಕೃಷ್ಣ ರೆಡಿ
1931ರ ಸೆಪ್ಟೆಂಬರ್ 21 ರಂದು ಜನಿಸಿದ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶಕರಾಗಿ ಮಾತ್ರವಲ್ಲದೆ ಬರಹಗಾರ, ನಿರ್ಮಾಪಕ ಮತ್ತು ಸಂಗೀತ ನಿರ್ದೇಶಕರಾಗಿಯೂ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಇತರ ಭಾಷೆಗಳಲ್ಲಿ ಅನೇಕ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಸಾಮಾನ್ಯ ಕಥೆಗಳನ್ನ ಕೂಡ ಅದ್ಭುತವಾಗಿ ಪರದೆಯ ಮೇಲೆ ತರುವ ನಿರ್ದೇಶಕ ಆಗಿದ್ದರು. ಡಾ. ರಾಜ್ಕುಮಾರ್ ಸಿನಿಮಾಗಳಿಗೂ ಆ್ಯಕ್ಷನ್ ಕಟ್ ಹೇಳಿದ್ದರು. ತೆಲುಗಿನಲ್ಲಿ ‘ಆದಿತ್ಯ 369’, ‘ಭೈರವ ದ್ವೀಪ’ದಂತಹ ಅನೇಕ ಚಲನಚಿತ್ರಗಳು ಸಿಂಗೀತಂ ಶ್ರೀನಿವಾಸ ರಾವ್ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.
ಕಮಲ್ ಹಾಸನ್ ಮತ್ತು ಬಾಲಕೃಷ್ಣರಂತಹ ಟಾಪ್ ನಟರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾವ್ ಅವರಿಗೆ ವಯಸ್ಸಾದರೂ ಸಿನಿಮಾ ಮೇಲಿನ ಆಸಕ್ತಿ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. 94 ನೇ ವಯಸ್ಸಿನಲ್ಲೂ ಅವರು ಮತ್ತೊಮ್ಮೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ: ಪುತ್ರನ ಮೊದಲ ಸಿನಿಮಾ ‘ಸಿಗ್ಮಾ’ ವೀಕ್ಷಿಸಲು ಚೆನ್ನೈಗೆ ಬಂದ ವಿಜಯ್ ಪತ್ನಿ ಸಂಗೀತಾ

