ಬೆಂಗಳೂರು: ರಸ್ತೆ ಬದಿ ಲೈಟ್ ಕಂಬ (Electric Pole) ಬಿದ್ದು ನೇಪಾಳ ಮೂಲದ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ಶುಕ್ರವಾರ ನಗರದ ಮಾರತ್ತಹಳ್ಳಿಯ ಸಂಜಯನಗರದಲ್ಲಿ ಗಣೇಶ ವಿಸರ್ಜನೆಗೆ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಆರ್ಕೆಸ್ಟ್ರಾ ಕೂಡ ನಡೆಯುತ್ತಿತ್ತು. ರಾತ್ರಿ ಹನ್ನೊಂದು ಗಂಟೆ ವೇಳೆಯಲ್ಲಿ ಜನ ರಸ್ತೆಯ ಪಕ್ಕದಲ್ಲಿ ನಿಂತು ನೋಡುತ್ತಿದ್ದರು. ಈ ವೇಳೆ ಏಕಾಏಕಿ ಕಂಬ ಬಿದ್ದು, ಅವಘಡ ಸಂಭವಿಸಿದೆ. ಇದನ್ನೂ ಓದಿ: 44 ವರ್ಷದ ಬಳಿಕ ಇತಿಹಾಸ ಸೃಷ್ಟಿ – ಚಿನ್ನಕ್ಕೆ ಮುತ್ತಿಟ್ಟ ಭಾರತ, ಒಲಿಂಪಿಕ್ಸ್‌ಗೆ ಅರ್ಹತೆ
ಲೈಟ್ ಕಂಬ ಹಳೆಯದಾಗಿದ್ದು, ಕರೆಂಟ್ ಕನೆಕ್ಷನ್ ಇರಲಿಲ್ಲ. ಕಂಬ ಮಾತ್ರ ಹಾಗೇ ಬಿಡಲಾಗಿತ್ತು. ಜಿಬಿಎ ಅಧಿಕಾರಿಗಳಿಗೆ ತುಂಬಾ ದಿನದಿಂದ ತೆರವು ಮಾಡುವಂತೆ ಮನವಿ ಮಾಡಿದ್ರೂ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ. ಸದ್ಯ ಸಾವನ್ನಪ್ಪಿದ್ದ ವ್ಯಕ್ತಿ ನೇಪಾಳದವನಾಗಿದ್ದು, ಆತನ ಗುರುತು ಪತ್ತೆ ಮಾಡಲು ಮುಂದಾಗಿದ್ದಾರೆ. ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ – ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ

