ಬಿಗ್‌ಬಾಸ್ (Bigg Boss) ಈ ಸೀಸನ್‌ನ ಸ್ಪರ್ಧಿಗಳ ಪೈಕಿ ಕಿಚ್ಚನ ಚಪ್ಪಾಳೆ ಪಡೆದುಕೊಂಡ ಮೊದಲ ಕಂಟೆಸ್ಟಂಟ್ ಆಸಿಯಾ. ಇದೀಗ ಇದೇ ಆಸಿಯಾ (Asiya Firdose), ಮಂಜ (Modern Mahakavi Manja) ಹಾಗೂ ಲಿಖಿತ್‌ಗೆ (Likhit) ಭರ್ಜರಿ ಆವಾಜ್ ಹಾಕಿದ್ದಾರೆ. ‘ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಂದಹಾಗೆ ಆಸಿಯಾ ಕೋಪಕ್ಕೆ ಕಾರಣೀಕರ್ತ ಸ್ಪರ್ಧಿ ಲಿಖಿತ್. ಆಸಿಯಾಗೆ ಲಿಖಿತ್ ಅಣುಕಿಸಿ ವ್ಯಂಗ್ಯ ಮಾಡಿದ್ದಾರೆ. ಮನೆಯ ಪ್ರಧಾನ ಬಾಗಿಲ ಬಳಿ ನಿಂತ ಲಿಖಿತ್ ಅಲ್ಲಿಂದಲೇ ಆಸಿಯಾಗೆ ಮೂತಿ ತಿರುವುತ್ತಾ ಅಣುಕಿಸುತ್ತಿರುತ್ತಾರೆ. ಲಿಖಿತ್ ಹೀಗೆ ವರ್ತಿಸುವ ವೇಳೆ ಆಸಿಯಾ ಡೈನಿಂಗ್ ಹಾಲ್‌ನಲ್ಲಿ ಕುಳಿತಿದ್ದರು. ಲಿಖಿತ್ ತನ್ನನ್ನ ನೋಡಿ ವ್ಯಂಗ್ಯ ಮಾಡುತ್ತಿದ್ದಂತೆ, `ಮಂಗನ ಥರ ಕಾಣ್ತೀಯ’ ಎಂದು ಆಸಿಯಾ ಅಲ್ಲಿಂದಲೇ ಹೇಳುತ್ತಾರೆ. ಇದನ್ನೂ ಓದಿ: ಬಾಲಿ ಟ್ರಿಪ್ ವೇಳೆ ಅಪಘಾತ; ಬೆನ್ನು ಮೂಳೆ ಮುರಿದುಕೊಂಡ ಬಾಲಿವುಡ್ ನಟಿ ನುಸ್ರತ್
ಸುಮ್ಮನಾಗದ ಲಿಖಿತ್ ವರ್ತನೆ ರಿಪೀಟ್ ಆಗುತ್ತಿದ್ದಂತೆ ಕುಳಿತ ಜಾಗದಿಂದ ಎದ್ದು ಲಿಖಿತ್ ಬಳಿ ಬರುವ ಆಸಿಯಾ, ‘ಮುಚ್ಕೊಂಡ್ ಇದ್ರೆ ಸರಿ ಇವಾಗ’ ಎಂದು ಲಿಖಿತ್‌ಗೆ ಬೈಯುತ್ತಾರೆ. ಈ ಘಟನೆ ನಡೆಯುತ್ತಿದ್ದ ವೇಳೆ ಮಾಡರ್ನ್ ಮಹಾಕವಿ ಮಂಜ ಜೈಲಲ್ಲಿ ಇರುತ್ತಾರೆ. ಅಲ್ಲಿಂದಲೇ ಮಂಜ ಸೀಟಿ ಹೊಡೆದು ಲಿಖಿತ್‌ಗೆ ಬೆಂಬಲಿಸುವಂತೆ ವರ್ತಿಸುತ್ತಾರೆ. ಆಗ ವಿಪರೀತ ಕೋಪಗೊಳ್ಳುವ ಆಸಿಯಾ, ‘ಮುಚ್ಕೊಂಡ್ ಕೂತ್ಕೊಳ್ಳೊಲೋ’ ಎಂದು ಕೋಪದಿಂದ ಹೇಳುತ್ತಾರೆ. ಬಳಿಕ ಮಂಜು ಅಳುಮುಂಜಿ ಎಂದು ರೇಗಿಸುತ್ತಾ ಮಾತು ಮುಂದುವರೆಸುತ್ತಾರೆ.
ಆಗ ಆಸಿಯಾ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡು, ‘ನಾನು ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ’ ಎಂದು ಚಿಟಕಿ ಹೊಡೆದು ಹೇಳುತ್ತಾರೆ. ಈ ಬಗ್ಗೆ ಬಿಗ್‌ಬಾಸ್ ಪ್ರೋಮೋ ರಿಲೀಸ್ ಆಗಿದೆ. ಆಸಿಯಾ, ಲಿಖಿತ್ ಮತ್ತು ಮಂಜನ ವಿರುದ್ಧ ರೌದ್ರರೂಪ ತಾಳಿದ್ದಾರೆ. ಇದನ್ನೂ ಓದಿ: ಮೊದಲ ಹಂತದ ಶೂಟಿಂಗ್ ಮುಗಿಸಿದ ಒರಿಜಿನಲ್ ಮಾನ್‌ಸ್ಟರ್

