– ಕುಮಾರಸ್ವಾಮಿ ಕುಟುಂಬದ ವೋಟ್ ಕಾಯುವ ಕೆಲಸ ಮಾಡ್ತಿದ್ದೇನೆ ಎಂದ ಸಿಎಂ
ಬೆಂಗಳೂರು: ಬಿಜೆಪಿಯವರ (BJP) ತಂತ್ರ, ಕುತಂತ್ರ ಎಲ್ಲ ಬಿಚ್ಚಿಡ್ತೀನಿ ಎಂದು ಎಸ್ಐಆರ್ ವಿಚಾರವಾಗಿ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ವಾಗ್ದಾಳಿ ನಡೆಸಿದರು.
ಗಾಂಧಿ ಜಯಂತಿ ಹಿನ್ನೆಲೆ ವಿಧಾನಸೌಧದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿದರು. ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಫೋಟೊಗೂ ಮಾಲಾರ್ಪಣೆ ಮಾಡಿದರು.
54 ಲಕ್ಷ ವೋಟ್ ಡಿಲೀಟ್ ಬಗೆಗಿನ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ, ಬಿಜೆಪಿಯವರ ತಂತ್ರ ಕುತಂತ್ರ ಎಲ್ಲ ಬಿಚ್ಚಿಡ್ತೀನಿ. ಚುನಾವಣಾ ಅಯೋಗ ಏನು ದಡ್ಡರಲ್ಲ. ನನ್ನ ವಿರುದ್ಧ ದೂರು ಕೊಡೋದಿದ್ರೆ ಕೊಡಲಿ, ಸಂತೋಷ. ನಾನು ಈ ಸಂದರ್ಭದಲ್ಲಿ ಮಾತನಾಡಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು. ಇದನ್ನೂ ಓದಿ: ಪರಿಷ್ಕರಣೆ ಬಳಿಕ 1 ತಿಂಗಳಲ್ಲಿ 1.37 ಲಕ್ಷ ಮತದಾರರ ಹೆಚ್ಚಳ – ರಾಜ್ಯದಲ್ಲಿ 84,900 ಫಾರ್ಮ್ 7 ಸಲ್ಲಿಕೆ
ಆರೋಪ ಸಾಬೀತು ಮಾಡುವಂತೆ ವಿಜಯೇಂದ್ರ ಸವಾಲು ಬಗ್ಗೆ ಮಾತನಾಡಿ, ಬಹಳ ಸಂತೋಷ. ಮಾತಾಡೋಣ, ಈ ಜಾಗದಲ್ಲಿ ಬೇಡ. ತಂತ್ರ ಮಂತ್ರ ಎಲ್ಲವನ್ನು ಬಿಚ್ಚಿಟ್ಟಿದ್ದೆ. ಚುನಾವಣಾ ಆಯೋಗ ದಡ್ಡರಲ್ಲ. ಅವರಿಗೆ ನಾನು ಏನು ಬೇಕೋ ಮನದಟ್ಟು ಮಾಡಿದ್ದೇನೆ. ಎಷ್ಟು ಮಾಡಿದ್ರು. ಒಂದು, ಹತ್ತೋ ಐವತ್ತು ಲಕ್ಷನೋ. ಎಲ್ಲವೂ ಬಿಚ್ಚಿ ಬಿಚ್ಚಿ ಬಿಚ್ಚಿ ಮುಂದಿನ ದಿನದಲ್ಲಿ ಹೊರಗೆ ಬರುತ್ತೆ ಎಂದು ತಿಳಿಸಿದರು.
ಸಿಎಂ ವಿರುದ್ಧ ಪೊಲೀಸರಿಗೆ ಬಿಜೆಪಿ ದೂರು ವಿಚಾರವಾಗಿ ಪ್ರತಿಕ್ರಿಯಿಸಿ, ಬಹಳ ಸಂತೋಷ ಇನ್ನು ಮಾಡಬೇಕು. ಅವರೇನು ಮಾಡಿದ್ದಾರೆ ಗೊತ್ತಿಲ್ಲ. ವಿರೋಧ ಪಕ್ಷ ಕಣ್ಣಿಗೆ ಬಟ್ಟೆ ಕಟ್ಟಿ ಕೆಲಸ ಮಾಡ್ತಿದ್ದಾರೆ. ಇಲ್ಲಿ ಬೇಡ ಅದೆಲ್ಲ ಎಂದರು.
ಆಯೋಗದಲ್ಲಿ ಧರಣಿ ಮಾಡಿದ್ದನ್ನು ಸಮರ್ಥಿಸಿಕೊಂಡ ಸಿಎಂ ಡಿಕೆಶಿ, ನಾನು ಆಫೀಸ್ನಲ್ಲೇ ಇದ್ದೆ. ನಾನೇನು ರಸ್ತೆಯಲ್ಲಿ ಕುಳಿತಿಲ್ಲ. ನಾನು ಆಯೋಗದವರಿಗೆ ಮಾಹಿತಿ ಕೊಟ್ಟೆ. ಆಯೋಗದವರು ಹೇಳಿದ್ದನ್ನು ನಾನು ಕೇಳಿಲ್ಲ. ನಮ್ಮ ಹೋರಾಟದ ಕಾರಣಕ್ಕೆ ತನಿಖೆ ಮಾಡಲು ಮುಂದಾದರು. ನಾನು ಜೆಡಿಎಸ್ ಮತ್ತು ಬಿಜೆಪಿ ನಾಯಕರ ಮತ ಸಹ ಕಾಯಬೇಕು. ಕುಮಾರಸ್ವಾಮಿ ವೋಟ್ ಸಹ ಕಾಯಬೇಕಲ್ಲವೇ? ಅದಕ್ಕೆ ಹೋರಾಟ ಮಾಡಿದ್ದು ಎಂದರು. ಇದನ್ನೂ ಓದಿ: ಇವರಂತೆ ಹೆದರಿಸಿ ಕಾನೂನುಬಾಹಿರವಾಗಿ ಜಮೀನು ಖರೀದಿಸಿರೋದು ಪ್ರೂವ್ ಮಾಡಿದ್ರೆ ನೇಣು ಹಾಕಿಕೊಳ್ತೀನಿ: ಸಿಎಂಗೆ ಹೆಚ್ಡಿಕೆ ಸವಾಲು
ಬಿಜೆಪಿಯವರು ರಾಜಕಾರಣದಲ್ಲಿ ಇರೋದಕ್ಕೆ ನಾಲಾಯಕ್. ಪೊಲೀಸರು ಮೊದಲು ಇವರನ್ನು ಬಂಧಿಸಬೇಕು. ಬಿಜೆಪಿಯವರಿಗೆ ನಾಚಿಕೆ ಆಗಬೇಕೆಂದು ಸಿಎಂ ವಾಗ್ದಾಳಿ ನಡೆಸಿದರು. 24 ಸಾವಿರ ವೋಟ್ ಡಿಲೀಟ್ಗೆ ಮಾತ್ರ ಅರ್ಜಿ ಕೊಟ್ಟಿದ್ದೇವೆ ಅಂತ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಅವರನ್ನು ಬಂಧಿಸಬೇಕು. ಇವರೆಲ್ಲರೂ ರಾಜಕಾರಣದಲ್ಲಿ ಇರಲು ನಾಲಾಯಕ್ ಎಂದು ಬಿಜೆಪಿ, ಜೆಡಿಎಸ್ ವಿರುದ್ಧ ಆಕ್ರೋಶ ಹೊರಹಾಕಿದರು.
ಕುಮಾರಸ್ವಾಮಿ ಕುಟುಂಬದ ವೋಟ್ ಕಾಯುವ ಕೆಲಸ ಮಾಡ್ತಿದ್ದೇನೆ. ಬಿಜೆಪಿ-ಜೆಡಿಎಸ್ ಎಲ್ಲರ ವೋಟ್ ಕಾಯುವ ಕೆಲಸ ಮಾಡುತ್ತಿದ್ದೇನೆ. ಚುನಾವಣಾ ಆಯೋಗಕ್ಕೆ ರಾಜ್ಯದ ಜನಪ್ರತಿನಿಧಿಯಾಗಿ ಹೋಗಿದ್ದೇನೆ. ನನ್ನ ವಿರುದ್ಧ ದೂರು ಕೊಡೋದಾದ್ರೆ ಕೊಡಲಿ ಎಂದು ಟಾಂಗ್ ಕೊಟ್ಟರು.

