ಬೆಂಗಳೂರು: ಸರ್ಕಾರ ಜನರಿಗೆ ಗುಡ್ ನ್ಯೂಸ್ ನೀಡಿದ್ದು, ಆನ್ಲೈನ್ ಫಟಾಫಟ್ ಅಂತ ಇ-ಕೆವೈಸಿ (E KYC) ಮಾಡಲು ಇದೀಗ ಹೊಸ ಆಪ್ ಬಿಡುಗಡೆ ಮಾಡಿದೆ.
ಈಗಾಗಲೇ ಸರ್ವರ್ ಸಮಸ್ಯೆಯಿಂದ ಇ-ಕೆವೈಸಿಗಾಗಿ ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದ್ದು, ಹೀಗಾಗಿ ಇದನ್ನು ತಪ್ಪಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಆಪ್ ರಿಲೀಸ್ ಮಾಡಿದೆ. ಇದನ್ನೂ ಓದಿ: ಮಂಜ, ಲಿಖಿತ್ ಎಡವಟ್ಟು – ಒಟ್ಟಾಗಿ ಸೇರಿ ಗಾನವಿಯನ್ನ ಜೈಲಿಗೆ ಕಳುಹಿಸಿದ ದೊಡ್ಮನೆ ಮಂದಿ
ಈ ಆಪ್ಗೆ ಅನ್ನಸೇವೆ ಎಂದು ಹೆಸರಿಡಲಾಗಿದ್ದು, ಎಂಟು ಜಿಲ್ಲೆಗೆ ಮಾತ್ರ ಲಾಂಚ್ ಮಾಡಲಾಗಿದೆ. ಈ ಆಪ್ ಮೂಲಕ ಮನೆಯಲ್ಲಿ ಕೂತು ಇ-ಕೆವೈಸಿ ಮಾಡಬಹುದು. ಸದ್ಯ ಬೆಂಗಳೂರು ನಗರ, ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕೊಪ್ಪಳದಲ್ಲಿ ಆಪ್ ಲಾಂಚ್ ಆಗಿದೆ. 20 ದಿನದ ಬಳಿಕ ಅಧಿಕೃತವಾಗಿ 31 ಜಿಲ್ಲೆಗೆ ಸಿಗುವಂತೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಬಗ್ಗೆ ಸಚಿವ ರಿಜ್ವಾನ್ ಅರ್ಷದ್ ಮಾತನಾಡಿ, ಇ-ಕೆವೈಸಿ ಅಪ್ಡೇಟ್ ಮಾಡೋಕೆ ಕೇಂದ್ರ ಹೇಳಿತ್ತು. ಆದರೆ ಸರ್ವರ್ ಸಮಸ್ಯೆ ಉದ್ಭವವಾಗಿದೆ. ಈಗ ಸರ್ವರ್ ಸಮಸ್ಯೆ ಬಗೆಹರಿಸಲು ಸೂಚಿಸಿದ್ದೇವೆ. ರಾಜ್ಯದಲ್ಲಿ ನಾಲ್ಕುವರೆ ಕೋಟಿ ಫಲಾನುಭವಿಗಳು ಇದ್ದಾರೆ. ಹೀಗಾಗಿ ನಾವು ಸರಿಯಾದ ರೀತಿಯಲ್ಲಿ ಸೇವೆ ಕೊಡಬೇಕು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಏಷ್ಯನ್ ಗೇಮ್ಸ್ ಕ್ರಿಕೆಟ್: ಶನಿವಾರ ‘ಚಿನ್ನಅ’ಕ್ಕಾಗಿ ಭಾರತ-ಪಾಕ್ ಕಾದಾಟ

