BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ (Bigg Boss 13) ಕ್ಯಾಪ್ಟನ್ಸಿ ಟಾಸ್ಕ್ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಉಸ್ತುವಾರಿಗಳ ಎಡವಟ್ಟಿನಿಂದ ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿದ್ದು, ಅತ್ಯುತ್ತಮವಾಗಿ ಟಾಸ್ಕ್ ಆಡಿ ತಂಡವನ್ನು ಗೆಲ್ಲಿಸಿದ ವೈಲ್ಡ್ ಕಾರ್ಡ್ ಸ್ಪರ್ಧಿ ಗಾನವಿಗೆ ಮನೆಯವರು ‘ಕಳಪೆ’ ನೀಡಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಉಸ್ತುವಾರಿಗಳಾಗಿ ಜವಾಬ್ದಾರಿ ವಹಿಸಿದ್ದ ಮಂಜು ಹಾಗೂ ಲಿಖಿತ್, ಟಾಸ್ಕ್‌ನ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ತಮಗೆ ತೋಚಿದಂತೆ ರೂಲ್ಸ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಟಾಸ್ಕ್ ಗೊಂದಲಕ್ಕೆ ಸಿಲುಕಿದ್ದು, ಕೊನೆಗೆ ಬಿಗ್ ಬಾಸ್ ಟಾಸ್ಕ್‌ನ್ನೇ ರದ್ದು ಮಾಡುವ ಪರಿಸ್ಥಿತಿ ಬಂದಿದೆ.
ಟಾಸ್ಕ್‌ನಲ್ಲಿ ಉತ್ತಮವಾಗಿ ಆಡಿದ ಗಾನವಿಗೆ ಮನೆಯವರು ಕಳಪೆ ನೀಡಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಗಾನವಿ, ಈ ಟಾಸ್ಕ್‌ನಲ್ಲೂ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಟಾಸ್ಕ್ ವೇಳೆ ಭಾರವನ್ನು ಎತ್ತಿ ಹಿಡಿಯುವ ಜವಾಬ್ದಾರಿ ಗಾನವಿಗೆ ನೀಡಲಾಗಿತ್ತು. ಇದನ್ನು ಅವರು ಉತ್ತಮವಾಗಿ ನಿಭಾಯಿಸಿದ್ದರು. ಆದರೂ ಟಾಸ್ಕ್ ಬಳಿಕ ಗಾನವಿಗೆ ಮನೆಯವರಿಂದ ಟೀಕೆ ಎದುರಾಗಿದೆ. ಸೌಂದರ್ಯಾ ಶೆಟ್ಟಿ ಸೇರಿದಂತೆ ಕೆಲವರು ಗಾನವಿಯನ್ನು ಟೀಕಿಸಿದ್ದು, ಬಳಿಕ ಇಡೀ ತಂಡವೇ ಅವರ ವಿರುದ್ಧ ನಿಂತಂತೆ ಕಾಣಿಸಿದೆ. ತಮ್ಮ ತಂಡ ಗೆದ್ದರೂ ಗಾನವಿಗೆ ಮನೆಯವರಿಂದ ಸಿಗಬೇಕಿದ್ದ ಬೆಂಬಲ ಸಿಗಲಿಲ್ಲ ಎಂಬ ಚರ್ಚೆ ವೀಕ್ಷಕರಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಮತ್ತೆ ಮೊಬೈಲ್, ಸಿಮ್‌ಕಾರ್ಡ್ ಪತ್ತೆ; ಆರೋಪಿಗಳ ವಿರುದ್ಧ FIR
ಉಸ್ತುವಾರಿಗಳಾಗಿ ಟಾಸ್ಕ್ ನಿಭಾಯಿಸಿದ ಮಂಜು ಹಾಗೂ ಲಿಖಿತ್ ಅವರ ನಡೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
ಉಸ್ತುವಾರಿಗಳ ಎಡವಟ್ಟಿನಿಂದಾಗಿ ಇಡೀ ಟಾಸ್ಕ್ ರದ್ದಾಗಿದ್ದು, ಕ್ಯಾಪ್ಟನ್ಸಿ ಅವಕಾಶವೂ ಕೈತಪ್ಪಿದೆ. ಹೀಗಿದ್ದರೂ ಮಂಜು ಹಾಗೂ ಲಿಖಿತ್ ಬಚಾವ್ ಆಗಿ, ಗಾನವಿ ಕಳಪೆ ಪಟ್ಟಕ್ಕೆ ಹೋಗಿರುವುದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ.ಇದನ್ನೂ ಓದಿ: ಮಂಗಳೂರು MRPLನಲ್ಲಿ ಭೀಕರ ಸ್ಫೋಟದ ತೀವ್ರತೆಗೆ ಮಂಗಳೂರು ಏರ್‌ಪೋರ್ಟ್ ಗಢ ಗಢ

