ನವದೆಹಲಿ: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ (fly dubai) ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಆರೋಪ ಹೊತ್ತಿರುವ ತನ್ನ ಸಹ-ಪೈಲಟ್ ವಿರುದ್ಧ ಹೋರಾಡಿ ವಿಮಾನವನ್ನು ರಕ್ಷಿಸಿದ “ಹೀರೋ” ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದು, ಭಾರತಕ್ಕೆ ಅವರ ಬಗ್ಗೆ ಹೆಮ್ಮೆಯಿದೆ ಎಂದಿದ್ದಾರೆ.
ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ.
Captain Smit Machchhar is a HERO.In the face of the gravest danger and despite being seriously injured, he showed immense courage and an unwavering resolve to protect the lives of others.His valour helped save hundreds of lives and avert a great tragedy.India is proud of…— Narendra Modi (@narendramodi) October 1, 2026
ಆಗಿದ್ದೇನು?
ಫ್ಲೈದುಬೈ ಸಂಸ್ಥೆಯ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು 174 ಪ್ರಯಾಣಿಕರೊಂದಿಗೆ ದುಬೈನಿಂದ ಟೆಲ್ ಅವಿವ್ ಕಡೆಗೆ ಹಾರಾಟ ನಡೆಸುತ್ತಿತ್ತು. ಟೇಕಾಫ್ ಆದ ಸುಮಾರು ಎರಡು ಗಂಟೆಗಳ ನಂತರ ಕಾಕ್‌ಪಿಟ್ ಒಳಗೆ ಇಬ್ಬರು ಪೈಲಟ್‌ಗಳ ನಡುವೆ ತೀವ್ರ ಸಂಘರ್ಷ ಶುರುವಾಗಿದೆ.ಓಮನ್ ಪ್ರಜೆಯಾಗಿರುವ ಸಹ-ಪೈಲಟ್, ಮುಖ್ಯ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ದಾಳಿಯಿಂದ ರಕ್ತಸಿಕ್ತವಾಗಿ ತೀವ್ರ ಗಾಯಗೊಂಡರೂ ಕ್ಯಾಪ್ಟನ್ ಸ್ಮಿತ್ ಅದ್ಭುತ ಧೈರ್ಯ ತೋರಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಕಾಕ್‌ಪಿಟ್‌ನಿಂದ ಭಾರಿ ಚೀರಾಟ ಮತ್ತು ಗಲಾಟೆ ಕೇಳಿಬಂದ ತಕ್ಷಣವೇ ಎಚ್ಚೆತ್ತ ವಿಮಾನ ಸಿಬ್ಬಂದಿ ಹಾಗೂ ಕೆಲ ಧೈರ್ಯಶಾಲಿ ಪ್ರಯಾಣಿಕರು ಒಳನುಗ್ಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ಇದನ್ನೂ ಓದಿ: ಗಗನದಲ್ಲೇ ಪೈಲಟ್‌ಗಳ ರಕ್ತಸಿಕ್ತ ಕಾದಾಟ; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್- ತಪ್ಪಿತು ದುರಂತ
ಓಮನ್ ಪ್ರಜೆಯಾಗಿರುವ ಪೈಲಟ್ ಇನ್ನೊಬ್ಬನಿಗೆ ಚಾಕುವಿನಿಂದ ಇರಿದು ಅಮೆರಿಕದಲ್ಲಿ ನಡೆದ 9/11 ಮಾದರಿಯಲ್ಲೇ ವಿಮಾನವನ್ನು ನೆಲಕ್ಕಪ್ಪಳಿಸಲು ಅಥವಾ ಹೈಜಾಕ್ ಮಾಡಲು ಯತ್ನಿಸಿದ್ದಾನೆ. ಆದರೆ ಭಾರತೀಯ ಕ್ಯಾಪ್ಟನ್ ತೀವ್ರವಾಗಿ ಗಾಯಗೊಂಡಿದ್ದರೂ ಆತನ ವಿರುದ್ಧ ಮರುಹೋರಾಟ ನಡೆಸಿ ವಿಮಾನ ಅಪಘಾತಕ್ಕೀಡಾಗುವುದನ್ನು ತಪ್ಪಿಸಿದ್ದಾರೆ ಎಂದು ಇಸ್ರೇಲಿ ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.ಇದನ್ನೂ ಓದಿ: ದುಬೈ–ಟೆಲ್ ಅವೀವ್ ಫ್ಲೈದುಬೈ ವಿಮಾನದಲ್ಲಿ ಹೈಜಾಕ್ ಎಚ್ಚರಿಕೆ – ಆಗಿದ್ದೇನು?

