* ಇಬ್ಬರು ಪೈಲಟ್ ಗಳ ಜಗಳ; ಹೈಜಾಕ್ ಅಲರ್ಟ್ ನೀಡಿದ್ದ ವಿಮಾನದ ಪೈಲಟ್
* 150ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನ
ದುಬೈ: ದುಬೈನಿಂದ ಟೆಲ್ ಅವೀವ್‌ಗೆ ಸುಮಾರು 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ‘ಫ್ಲೈದುಬೈ’ (Flydubai) ವಿಮಾನವೊಂದು ಹೈಜಾಕ್ ಭೀತಿ ಹುಟ್ಟುಹಾಕಿ, ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇಸ್ರೇಲಿ ಅಧಿಕಾರಿಗಳು ಈ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದಾರೆ.
ವಿಮಾನ ಹಾರಾಟದ ಸಂದರ್ಭದಲ್ಲಿ ಪೈಲಟ್ ಕೆಲಕಾಲ ‘7500’ ಎಮರ್ಜೆನ್ಸಿ ಕೋಡ್ ಒತ್ತಿದ್ದರು ಎನ್ನಲಾಗಿದೆ. ‘7500’ ಕೋಡ್ ಹೈಜಾಕ್ ಸೂಚಿಸುವ ಅಂತಾರಾಷ್ಟ್ರೀಯ ಎಚ್ಚರಿಕೆಯಾಗಿದೆ. ಬಳಿಕ ವಿಮಾನ ಸೌದಿ ಅರೇಬಿಯಾ ವಾಯುಪ್ರದೇಶದತ್ತ ಡೈವರ್ಟ್ ಆಯಿತು. ಅಂತಿಮವಾಗಿ ವಿಮಾನ ಸುರಕ್ಷಿತವಾಗಿ ಸೌದಿಯಲ್ಲಿ ಲ್ಯಾಂಡ್ ಆಗಿದೆ. ಪೈಲಟ್‌ಗಳ ನಡುವಿನ ಜಗಳದಿಂದಾಗಿ 7500 ಎರ್ಮಜೆನ್ಸಿ ಕೋಡ್ ಒತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಟಾಪ್ ಲಷ್ಕರ್ ಉಗ್ರ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ್ಯೆ
ವಿಮಾನವನ್ನು ಅದರ ನಿಗದಿತ ಮಾರ್ಗದಿಂದ ಬೇರೆಡೆಗೆ ತಿರುಗಿಸಿದ ನಂತರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭದ್ರತಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಅಂತಿಮವಾಗಿ ವಿಮಾನ ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.

