ನವದೆಹಲಿ: ಹಬ್ಬದ ಹೊಸ್ತಿಲಲ್ಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ (Commercial Cylinder Price) ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ. ಇಂದಿನಿಂದ (ಅ.1) ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 62.50 ರೂ. ಹೆಚ್ಚಿಸಲಾಗಿದೆ.
ಇಂದಿನಿಂದಲೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರ ಹೆಚ್ಚಾಗಿದ್ದು, ಹಬ್ಬದ ಸೀಸನ್‌ಗೂ ಮುನ್ನ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ 62.50 ರೂ. ಹೆಚ್ಚಾಗಿದ್ದು, ಇದರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಡಾಬಾಗಳಲ್ಲಿ ನಿರ್ವಹಣಾ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಇದನ್ನೂ ಓದಿ:ಸಂಗೀತಾ, ಆಸಿಯಾ, ಕಾವ್ಯ, ಸೌಂದರ್ಯ ಸ್ಪರ್ಧಿಗಳ ಆಟ ವೈಷ್ಣವಿ ಪ್ರಕಾರ ಹೇಗಿದೆ?
ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು 62.50 ರೂ.ಗಳಷ್ಟು ಏರಿಕೆಯಾಗಿ 2,810 ರೂ. ತಲುಪಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್‌ನಲ್ಲಿ 2,747.50 ರೂಪಾಯಿಗಳಷ್ಟಿತ್ತು. ಇಂದಿನಿಂದಲೇ ಹೊಸ ದರ ಜಾರಿಯಾಗಲಿದ್ದು, ಗೃಹಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿವೆ.

