ನಗೋಯಾ: ಮಿಶ್ರ ತಂಡದ ಟ್ರ್ಯಾಪ್ ಶೂಟಿಂಗ್ನಲ್ಲಿ (Trap Shooting) ಹೊಸ ದಾಖಲೆ ಬರೆದು ನೀರು ಧಂಡಾ ಮತ್ತು ಕೈನಾನ್ ಚೆನೈ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿದ್ದಾರೆ.
ನೀರು ಧಂಡಾ ಮತ್ತು ಕೈನಾನ್ ಚೆನೈ ಅವರಿದ್ದ ಭಾರತ ತಂಡವು 34 ಅಂಕಗಳನ್ನು ಗಳಿಸುವ ಮೂಲಕ ಏಷ್ಯನ್ ಗೇಮ್ಸ್ನ (Asian Games) ಮಿಶ್ರ ಟ್ರ್ಯಾಪ್ ಶೂಟಿಂಗ್ ಫೈನಲ್ನಲ್ಲಿ ಭಾರತಕ್ಕೆ 8ನೇ ಚಿನ್ನ ತಂದುಕೊಟ್ಟಿದೆ. 34-32 ಅಂತರಗಳೊಂದಿಗೆ ಭಾರತ ಕತಾರ್ ತಂಡವನ್ನು ಅನ್ನು ಸೋಲಿಸಿತು.
History made. Record shattered. GOLD for Bharat! 🇮🇳🥇
Heartiest congratulations to Neeru and Kynan Chenai on clinching India’s first-ever Gold in the Trap Mixed Team event at #AsianGames2026.
Holding their nerve under pressure, the duo delivered a sensational 34/40 in the final… pic.twitter.com/w7oAXh7v2E
— Smriti Z Irani (@smritiirani) September 30, 2026
ಇದಕ್ಕೂ ಮುನ್ನ ನೀರು ಧಂಡಾ ವೈಯಕ್ತಿಕ ಶೂಟಿಂಗ್ನಲ್ಲಿ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದೀಗ ಮತ್ತೊಂದು ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಈ ಮೂಲಕ ಭಾರತ ಒಟ್ಟು 8 ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.

