– ಉಪ್ಪು ಬಳಕೆ & ಸೇವನೆ ಬಗ್ಗೆ ಎಚ್ಚರ
ಬೆಂಗಳೂರು: ಉಪ್ಪು ಬಳಕೆ ಮತ್ತು ಸೇವನೆ ಬಗ್ಗೆ ಎಚ್ಚರಿಕೆ ನೀಡಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಈ ಸಂಬಂಧ ಸಾರ್ವಜನಿಕರು, ಶಾಲೆಗಳು, ಹೋಟೆಲ್-ರೆಸ್ಟೋರೆಂಟ್, ಆಹಾರ ಪ್ಯಾಕೇಜ್ಡ್ ತಯಾರಕರಿಗೆ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಅತಿಯಾದ ಉಪ್ಪು ಸೇವನೆಯಿಂದ ರಕ್ತದೊತ್ತಡ, ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಒಬ್ಬ ವ್ಯಕ್ತಿ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವನೆ ಮಾಡಬೇಕು. ಆದರೆ, ಅತಿಯಾದ ಸೇವನೆ ಮಾಡಲಾಗುತ್ತಿದೆ ಎಂದು ಎಚ್ಚರಿಸಿದೆ.
ಉಪ್ಪು ಸೇವನೆ; ಸಾಮಾನ್ಯ ಜನರಿಗೆ ಮಾರ್ಗಸೂಚಿ ಏನು?
1. ದಿನಕ್ಕೆ 5 ಗ್ರಾಂ ಗಿಂತ ಕಡಿಮೆ ಉಪ್ಪು ಸೇವಿಸಿ.
2. ಅಡುಗೆ ಮಾಡುವಾಗ ಉಪ್ಪನ್ನು ಕಡಿಮೆ ಹಾಕಿ. ಉಪ್ಪಿನಕಾಯಿ, ಚಟ್ನಿ, ಸ್ನ್ಯಾಕ್ಸ್ ಮಾಡುವಾಗ ಉಪ್ಪು ಕಡಿಮೆ ಬಳಸಿ.
3. ಊಟ ಮಾಡುವ ಮೊದಲು ರುಚಿ ನೋಡದೆ ಸುಮ್ಮನೆ ಉಪ್ಪು ಹಾಕಬೇಡಿ.
4. ಸಂಸ್ಕರಿಸಿದ, ಪ್ಯಾಕ್ ಮಾಡಿದ, ಇನ್ ಸ್ಟಂಟ್ ಮತ್ತು ರೆಡಿ-ಟು-ಈಟ್ ಆಹಾರಗಳನ್ನು ಕಡಿಮೆ ತಿನ್ನಿ.
5. ಪ್ಯಾಕ್ ಮಾಡಿದ ಆಹಾರ ಕೊಳ್ಳುವಾಗ ಅದರ ಲೇಬಲ್ನಲ್ಲಿ ಉಪ್ಪು/ಸೋಡಿಯಂ ಅಂಶ ನೋಡಿ ಹೋಲಿಕೆ ಮಾಡಿಕೊಳ್ಳಿ.
6. ತಾಜಾ ಮತ್ತು ಕಡಿಮೆ ಸಂಸ್ಕರಿಸಿದ ಆಹಾರ, ಹಣ್ಣು-ತರಕಾರಿ ಹೆಚ್ಚು ಸೇವಿಸಿ.
7. ಪೋಷಕರು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಡಿಮೆ ಉಪ್ಪಿನ ಅಭ್ಯಾಸ ಬೆಳೆಸಿ.
8. BP ಅಥವಾ ಇತರ ಕಾಯಿಲೆ ಇರುವವರು ಉಪ್ಪು ಕಡಿಮೆ ಮಾಡುವ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.
9. Low-sodium ಉಪ್ಪಿನ ಬದಲಿ ಬಳಸುವಾಗ ಆಹಾರ ಸುರಕ್ಷತೆ ಮತ್ತು ವೈದ್ಯಕೀಯ ಸಲಹೆ ಪಾಲಿಸಿ, ವಿಶೇಷವಾಗಿ ಕಿಡ್ನಿ ಕಾಯಿಲೆ ಇರುವವರು.
ಉಪ್ಪು ತಯಾರಿಕಾ ಘಟಕಗಳಿಗೆ ಸೂಚನೆ ಏನು?
1. ಸರ್ಕಾರದ ಉಪ್ಪು ಕಡಿತ ಪ್ರಯತ್ನಕ್ಕೆ ಬೆಂಬಲ ನೀಡಿ.
2. Low-sodium ಅಥವಾ iodised low-sodium ಉಪ್ಪಿನ ಬದಲಿ ತಯಾರಿಸಲು ಪ್ರಯತ್ನಿಸಿ.
3. Low-sodium ಉಪ್ಪು ಎಲ್ಲಾ ಆಹಾರ ಸುರಕ್ಷತಾ ಮಾನದಂಡಗಳನ್ನು ಪಾಲಿಸಬೇಕು.
4. ಉತ್ಪನ್ನದ ಸಂಯೋಜನೆ, ಬಳಕೆ ಮತ್ತು ಮುನ್ನೆಚ್ಚರಿಕೆಗಳನ್ನು ಲೇಬಲ್ನಲ್ಲಿ ಸ್ಪಷ್ಟವಾಗಿ ನಮೂದಿಸಿ.
5. ಗುಣಮಟ್ಟ ನಿಯಂತ್ರಣ ಕ್ರಮ ಕೈಗೊಳ್ಳಿ.
6. ಆರೋಗ್ಯ ಇಲಾಖೆ ಮತ್ತು FSSAI ಜೊತೆ ಸಹಕರಿಸಿ.
ಆಹಾರ ಮತ್ತು ಪ್ಯಾಕೇಜ್ಡ್ ಫುಡ್ ತಯಾರಕರಿಗೆ ಸಲಹೆ ಏನು?
1. ತಮ್ಮ ಉತ್ಪನ್ನಗಳಲ್ಲಿ ಉಪ್ಪು/ಸೋಡಿಯಂ ಅಂಶವನ್ನು ಹಂತ ಹಂತವಾಗಿ ಕಡಿಮೆ ಮಾಡಿ.
2. ಆಹಾರ ಸುರಕ್ಷತೆ, ಗುಣಮಟ್ಟಕ್ಕೆ ಧಕ್ಕೆ ಬಾರದೆ ಉಪ್ಪು ಕಡಿಮೆ ಮಾಡಬಹುದಾದ ಉತ್ಪನ್ನಗಳನ್ನು ಗುರುತಿಸಿ.
3. ಸೋಡಿಯಂ ಬದಲಿಗೆ ತಾಂತ್ರಿಕವಾಗಿ ಸಾಧ್ಯವಿರುವ ಪರ್ಯಾಯಗಳನ್ನು ಬಳಸಿ.
4. ಲೇಬಲ್ನಲ್ಲಿ ಪೌಷ್ಟಿಕಾಂಶದ ಮಾಹಿತಿಯನ್ನು ಸ್ಪಷ್ಟವಾಗಿ ನೀಡಿ.
5. ಈSSಂI ಮಾನದಂಡಗಳನ್ನು ಪಾಲಿಸಿ.
ಹೋಟೆಲ್, ರೆಸ್ಟೋರೆಂಟ್ಗಳಿಗೆ ಸಲಹೆ
1. ಅಡುಗೆಯಲ್ಲಿ ಉಪ್ಪನ್ನು ಹಂತ ಹಂತವಾಗಿ ಕಡಿಮೆ ಮಾಡುವ ಪ್ರಮಾಣಿತ ಪದ್ಧತಿ ಅಳವಡಿಸಿ.
2. ಅಡುಗೆಯವರಿಗೆ ಕಡಿಮೆ ಉಪ್ಪಿನ ಅಡುಗೆ ಬಗ್ಗೆ ತರಬೇತಿ ನೀಡಿ.
3. ಅನಗತ್ಯವಾಗಿ ಉಪ್ಪು ಹಾಕುವುದನ್ನು ತಪ್ಪಿಸಿ.
4. ಊಟದ ಮೇಜಿನ ಮೇಲೆ ಉಪ್ಪಿನ ಡಬ್ಬಿ ಇಡುವುದನ್ನು ನಿರುತ್ಸಾಹಗೊಳಿಸಿ.
5. ಆರೋಗ್ಯಕರ ಮತ್ತು ಕಡಿಮೆ ಉಪ್ಪಿನ ಆಯ್ಕೆಗಳನ್ನು ನೀಡಿ.
6. ‘ಉಪ್ಪು ಕಡಿಮೆ ಮಾಡಿ’ ಎಂಬ ಸಂದೇಶಗಳನ್ನು ಪ್ರದರ್ಶಿಸಿ.
ಸ್ಟ್ರೀಟ್ ಫುಡ್ ಮಾರಾಟಗಾರರಿಗೆ ಸಲಹೆ
1. ಉಪ್ಪು ಕಡಿತದ ಬಗ್ಗೆ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.
2. ತಯಾರಿಕೆ ಮತ್ತು ಬಡಿಸುವಾಗ ಅನಗತ್ಯ ಉಪ್ಪು ಹಾಕಬೇಡಿ.
3. ಸಾಧ್ಯವಾದಷ್ಟು ಕಡಿಮೆ ಉಪ್ಪಿನ ಅಡುಗೆ ಪದ್ಧತಿ ಅಳವಡಿಸಿ.
ಶಾಲಾ-ಕಾಲೇಜುಗಳಿಗೆ ಸೂಚನೆ
1. ಮಕ್ಕಳು ಮತ್ತು ಹದಿಹರೆಯದವರಲ್ಲಿ ಆರೋಗ್ಯಕರ ಆಹಾರ ಮತ್ತು ಉಪ್ಪು ಕಡಿತದ ಬಗ್ಗೆ ಶಿಕ್ಷಣ ನೀಡಿ.
2. ಶಾಲೆಯಲ್ಲಿ ನೀಡುವ ಊಟ ಮತ್ತು ಸ್ನ್ಯಾಕ್ಸ್ನಲ್ಲಿ ಉಪ್ಪು ಕಡಿಮೆ ಮಾಡಿ.
3. ಶಾಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ ಉಪ್ಪು ಕಡಿತ ಸಂದೇಶ ಸೇರಿಸಿ.
4. ಪೋಷಕರಿಗೆ ಮನೆಯಲ್ಲಿ ಆರೋಗ್ಯಕರ ಅಭ್ಯಾಸ ಬೆಳೆಸಲು ಪ್ರೇರೇಪಿಸಿ.
5. ಅಡುಗೆಯವರು ಮತ್ತು ಆಹಾರ ಸಿಬ್ಬಂದಿಗೆ ಉಪ್ಪಿನ ಸರಿಯಾದ ಬಳಕೆ ಬಗ್ಗೆ ತರಬೇತಿ ನೀಡಿ.

