ಕೊಪ್ಪಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಕೊಪ್ಪಳದ (Koppal) ಗವಿಮಠಕ್ಕೆ ಆಗಮಿಸಿ ಗವಿಶ್ರೀಗಳಿಗೆ ಮೈಸೂರು ದಸರಾಗೆ ಅಧಿಕೃತ ಆಹ್ವಾನ ನೀಡಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವರ್ಷ ದಸರಾ ಉದ್ಘಾಟನೆಗೆ ಕೊಪ್ಪಳ ಶ್ರೀಗಳನ್ನ ಆಯ್ಕೆ ಮಾಡಿದ್ದು ಖುಷಿ ತಂದಿದೆ. ಶ್ರೀಗಳನ್ನ ಒಪ್ಪಿಸಲಿಕ್ಕೆ ಸಿಎಂ ಡಿಕೆಶಿ ಅವರು ಮನವಿ ಮಾಡಿದ್ದರು. ಅದರಂತೆ ಪ್ರೀತಿ ವಿಶ್ವಾಸದಿಂದ ಶ್ರೀಗಳು ಒಪ್ಪಿಕೊಂಡಿದ್ದಾರೆ. ಆದರೆ ಕೆಲವೊಂದಿಷ್ಟು ಕಿಡಿಗೇಡಿಗಳು ಅಪಪ್ರಚಾರ ಮಾಡುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: KPSC Scam| ಬಸವರಾಜ್ ಕನ್ನಾಳೆ ರಹಸ್ಯ ಡೈರಿ ಪತ್ತೆ- ಲಕ್ಷ ಲಕ್ಷ ಡೀಲ್ ಬಯಲು
ಶ್ರೀಗಳು ಸೂಕ್ಷ್ಮ ಸ್ವಭಾವದವರು, ಯಾರೇ ಇರಲಿ ಅಪಪ್ರಚಾರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಅಧಿಕೃತ ಸಾಕ್ಷಿಗಳಿಲ್ಲದೇ ಮಾಧ್ಯಮಗಳಲ್ಲಿ ಬರುವ ಕೆಲಸ ಆಗಿದೆ. ಇವತ್ತು ಸುಳ್ಳು ಸುದ್ದಿ ಮಾಡಿದ ಮಾಧ್ಯಮದವರ ಮೇಲೆ ನೋಟಿಸ್ ನೀಡುವ ಕೆಲಸ ಆಗುತ್ತದೆ ಎಂದಿದ್ದಾರೆ.
ಮೈಸೂರು ದಸರಾ ಮಹೋತ್ಸವ ಉದ್ಘಾಟಿಸಲು ಒಪ್ಪಿರುವ ಪರಮಪೂಜ್ಯ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು ಇಂದು ಮಠದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದು, ಫಲಪುಷ್ಪ ನೀಡಿ ಗೌರವಪೂರ್ವಕವಾಗಿ ಆಹ್ವಾನಿಸಿದೆವು.
ನಾಡಿನ ಹೆಮ್ಮೆಯ ಮೈಸೂರು ದಸರಾ ಮಹೋತ್ಸವಕ್ಕೆ ಪೂಜ್ಯ ಶ್ರೀಗಳ ಸಾನ್ನಿಧ್ಯ ಹಾಗೂ ಆಶೀರ್ವಾದ ಮತ್ತಷ್ಟು ಮೆರುಗು, ಶೋಭೆ ಮತ್ತು… pic.twitter.com/tL07hDNeM7
— Shivaraj S Tangadagi (@sstangadagi) September 28, 2026
ಇದು ನಮ್ಮ ಜಿಲ್ಲೆಗೆ ಸಿಕ್ಕಿರುವ ಸೌಭಾಗ್ಯ, ಇಂತಹ ಶ್ರೀಗಳಿಂದ ಉದ್ಘಾಟನೆ ಮಾಡಿಸುವುದು ನಮ್ಮ ಸರ್ಕಾರಕ್ಕೆ ಹೆಮ್ಮೆ ತರುವ ಕೆಲಸ. ಶ್ರೀಗಳಿಗೆ ಅದ್ದೂರಿತನ ಬೇಡ ಅಂತ ಹೇಳ್ತಾರೆ. ಎಲ್ಲರೂ ಇದನ್ನ ಅರ್ಥ ಮಾಡ್ಕೊಬೇಕು, ಇಂತಹವರಿಂದ ದಸರಾ ಉದ್ಘಾಟನೆ ಆಗ್ತಿದೆ. ಶ್ರೀಗಳಿಗೆ ಸಿಕ್ಕಿರೋದು ಇದು ನಮ್ಮ ಪುಣ್ಯ. ಈ ಹಿಂದೆ ಮೂರು ಜನರಿಗೆ ನಾನು ಆಹ್ವಾನ ಕೊಟ್ಟಿದ್ದೇನೆ, ಈ ರೀತಿ ಯಾವಾಗ್ಲೂ ಆಗಿಲ್ಲ. ಅಧಿಕೃತವಾಗಿ ನಾವು ಮತ್ತು ಮಠದವರು ಇದರ ಬಗ್ಗೆ ಹೇಳಬೇಕು. ಇಂತಹ ಅನುಭವ ಆಗಿರಲಿಲ್ಲ, ಈಗ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.ಇದನ್ನೂ ಓದಿ: ಯುಪಿಐ ಎಂಡಿಆರ್ ಶುಲ್ಕ: ಹೊಸ ನಿಯಮಕ್ಕೆ ತಡೆ ನೀಡಲು ಸುಪ್ರೀಂ ನಿರಾಕರಣೆ

