ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ (Biligiri Rangana Betta) ಅರಣ್ಯ ಭಾಗದಲ್ಲಿ ಕಿಡಿಗೇಡಿಗಳು ಗಾಂಜಾ ಬೆಳೆದಿರುವುದು ಪತ್ತೆಯಾಗಿದೆ. ಸುಮಾರು 292 ಗಾಂಜಾ ಗಿಡಗಳು (Cannabis Plants) ಪತ್ತೆಯಾಗಿವೆ.
ಬೈಲೂರು ವಲಯದ ಕೂಳಿಹಟ್ಟಿ, ಬೆಳ್ಳಾಜೆ ಬೀಟ್ನಲ್ಲಿ ಅಬಕಾರಿ ಹಾಗೂ ಅರಣ್ಯಾಧಿಕಾರಿಗಳ ಜಂಟೀ ಕಾರ್ಯಾಚರಣೆ ವೇಳೆ ಗಾಂಜಾ ಗಿಡಗಳು ಪತ್ತೆಯಾಗಿವೆ. ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ. ಇದನ್ನೂ ಓದಿ: ತುಮಕೂರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಅರೆಸ್ಟ್
ಪತ್ತೆಯಾದ ಗಾಂಜಾ ಗಿಡಗಳ ತೂಕ ಸುಮಾರು 213 ಕೆಜಿ ಇದೆ. ಈ ಪ್ರಮಾಣದ ಗಾಂಜಾ ಗಿಡಗಳು ಪತ್ತೆಯಾಗಿರುವುದು ತೀವ್ರ ಕಳವಳಕ್ಕೂ ಕಾರಣವಾಗಿದೆ.
ಅರಣ್ಯದಲ್ಲಿ ಗಾಂಜಾ ಬೆಳೆದವರು ಯಾರು ಎಂಬುದು ಗೊತ್ತಾಗಿಲ್ಲ. ಕಾಡಿನಲ್ಲಿ ಗಾಂಜಾ ಬೆಳೆದವರು ಯಾರು ಎಂದು ಪತ್ತೆ ಹಚ್ಚಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಇದನ್ನೂ ಓದಿ: ಸ್ನ್ಯಾಕ್ಸ್ ಪ್ಯಾಕೆಟ್ಗಲ್ಲಿ ಗಾಂಜಾ ಚಾಕ್ಲೆಟ್ ಇಟ್ಟು ಮಾರಾಟ – ಆರೋಪಿ ಅರೆಸ್ಟ್

