– ಕನ್ನಾಳೆ ಶಿಷ್ಯ ಪವನ್ಗಾಗಿ ಸಿಐಡಿ ಅಧಿಕಾರಿಗಳ ಹುಡುಕಾಟ
ಬೆಂಗಳೂರು: ಕೆಪಿಎಸ್ಸಿ (KPSC Scam) ಪಶುವೈದ್ಯಾಧಿಕಾರಿಗಳ ಅಕ್ರಮ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಮತ್ತಷ್ಟು ಸ್ಪೋಷ್ಟಕ ವಿಷಯಗಳು ಬಯಲಿಗೆಳೆದಿದೆ. ಈ ನಡುವೆ ಬಸವರಾಜ್ ಕನ್ನಾಳೆ ಶಿಷ್ಯ ಪವನ್, ತನ್ನ ಸ್ನೇಹಿತನಿಗೆ ಸೀಟ್ ಕೊಡಿಸಲು ಮತ್ತೊಬ್ಬ ಅಭ್ಯರ್ಥಿ ಜೊತೆ 30 ಲಕ್ಷ ರೂ. ಡೀಲ್ ಮಾಡಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಬೀದರ್ ಜಿಲ್ಲೆಯ ಅಭ್ಯರ್ಥಿಯೊಬ್ಬನ ಕುಟುಂಬ ಕಡುಬಡವರಿದ್ದ ಕಾರಣ ಅವನಿಗೆ ಪಶು ವೈದ್ಯಾಧಿಕಾರಿ ಸೀಟ್ಗಾಗಿ ಅಷ್ಟೊಂದು ಹಣ ಹೊಂದಿಸಲು ಅಸಾಧ್ಯವಾಗಿತ್ತು. ಕನ್ನಾಳೆ ಶಿಷ್ಯನಾಗಿದ್ದ ಪವನ್ ಹಾಗೂ ಆ ಅಭ್ಯರ್ಥಿಯ ನಡುವೆ ಒಳ್ಳೆಯ ಒಡನಾಟವಿತ್ತು. ಆದ್ದರಿಂದ ತನ್ನ ಗೆಳೆಯನಿಗೆ ಫ್ರೀ ಸೀಟ್ ಕೊಡಿಸಿ ಅಂತಾ ಪವನ್ ಕನ್ನಾಳೆ ಬಳಿ ಮನವಿ ಮಾಡಿಕೊಂಡಿದ್ದ. ಕನ್ನಾಳೆ ಆತನ ಮನವಿ ನಿರಾಕರಿಸಿದ್ದಕ್ಕೆ ಪವನ್ ಮಾಸ್ಟರ್ ಪ್ಲ್ಯಾನ್ವೊಂದನ್ನ ಮಾಡಿದ್ದ.
ಪವನ್ ತನ್ನ ಗೆಳಯನಿಗೆ ವೈದ್ಯ ಹುದ್ದೆ ಕೊಡಿಸುವಂತೆ ಕನ್ನಾಳೆ ಬಳಿ ಕೇಳಿದ್ದ. ಆದರೆ ಕನ್ನಾಳೆ, ಯಾರೊಬ್ಬರಿಗೂ ಪುಕ್ಕಟ್ಟೆಯಾಗಿ ಸರ್ಕಾರಿ ಕೆಲಸ ಕೊಡಿಸಲು ಆಗೋದಿಲ್ಲ, ನನ್ನ ಬಳಿ ದಾನ-ಧರ್ಮದ ವಿಚಾರ ಮಾತಾಡ್ಬೇಡ ಎಂದು ಹೇಳಿದ್ದ. ಇದರಿಂದ ಪವನ್ ತನ್ನ ಸ್ನೇಹಿತನಿಗೋಸ್ಕರ ಬೀದರ್ ಜಿಲ್ಲೆಯ ಮತ್ತೊಬ್ಬ ಅಭ್ಯರ್ಥಿ ಜೊತೆ ಸೀಟ್ಗಾಗಿ 30 ಲಕ್ಷ ಹಣ ಡೀಲ್ ಕುದುರಿಸಿದ್ದ. ತನಿಖೆ ವೇಳೆ ಆ 30 ಲಕ್ಷದಲ್ಲಿ 17 ಲಕ್ಷವನ್ನ ಸ್ನೇಹಿತ ಅಭ್ಯರ್ಥಿಯ ಹೆಸರಲ್ಲಿ ಕನ್ನಾಳೆಗೆ ನೀಡಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ನಾನು ಸಿಂಗಲ್ ಫೈಟರ್… ಗುಂಪು ಕಟ್ಟಿಕೊಂಡು ಹೋಗಲ್ಲ: ಡಿಕೆಶಿ
ಸದ್ಯ ಸಿಐಡಿ ವಿಚಾರಣೆಯಲ್ಲಿ ದಾನ-ಧರ್ಮದ ಮಾತುಕತೆಯ ವಿಚಾರ ಬಹಿರಂಗವಾಗಿದೆ. ಅಲ್ಲದೇ ಈಗಾಗಲೇ ಈ 17 ಲಕ್ಷ ಹಣವನ್ನ ಕನ್ನಾಳೆಯಿಂದ ಸೀಜ್ ಮಾಡಿರೋ ಸಿಐಡಿ ಅಧಿಕಾರಿಗಳು, ಮೊದಲ ಹಂತದ ತನಿಖೆಯಲ್ಲಿ 11 ಅಭ್ಯರ್ಥಿಗಳಿಂದ 1.45 ಕೋಟಿ ಹಣ ಕನ್ನಾಳೆ ಟೀಂ ಪಡೆದಿದ್ದು ಪತ್ತೆ ಮಾಡಿದ್ದಾರೆ. ಸದ್ಯ ಬಸವರಾಜ್ ಕನ್ನಾಳೆ ಶಿಷ್ಯ ಪವನ್ಗಾಗಿ ಸಿಐಡಿ ಅಧಿಕಾರಿಗಳಿಂದ ಹುಡುಕಾಟ ನಡೆಸಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಜೊತೆ ನಾನು ಬಂಡೆ ತರ ನಿಂತಿದ್ದೇನೆ, ಅವ್ರೂ ನನ್ನ ಪರವಾಗಿ ನಿಲ್ತಾರೆ: ಡಿಕೆ ಶಿವಕುಮಾರ್

