ಕಲಬುರಗಿ: ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳ ಬಳಿಕ ಇದೀಗ ಸರ್ಕಾರವೇ ಟೆಂಡರ್ ಕರೆದು ಶಾಲಾ ಮಕ್ಕಳಿಗೆ ಶೂ ವಿತರಣೆ ಮಾಡಿದೆ. ಆದರೆ ರಾಜ್ಯ ಸರ್ಕಾರ (Karnataka Govt) ಶೂಭಾಗ್ಯ ಯೋಜನೆಯಡಿ ನೀಡಿದ ಶೂ ಹಾಗು ಸಾಕ್ಸ್ ಅತ್ಯಂತ ಕಳಪೆಯಾಗಿವೆ.
ಕಲಬುರಗಿ (Kalaburagi) ನಗರದ ತಾರಫೈಲ್ ಬಡಾವಣೆಯಲ್ಲಿರೋ ಸರ್ಕಾರಿ ಫ್ರೌಢ ಶಾಲೆಯಲ್ಲಿ ನೀಡಲಾಗಿರುವ ಶೂಗಳು ವಿತರಣೆಗೂ ಮುನ್ನವೇ ಕಿತ್ತು ಹೋಗಿವೆ. ಶಾಲಾ ಮಕ್ಕಳು ಶೂ ಹಾಕಿದ್ರೆ ಕಾಲಿಗೆ ಗುಳ್ಳೆಗಳು ಬರ್ತಿವೆ. ಇಂತಹ ಶೂ ಕೊಡಲು ಸರ್ಕಾರಕ್ಕೆ ಹೇಗೆ ಮನಸ್ಸು ಬಂತು ಅಂತಾ ವಿದ್ಯಾರ್ಥಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಭಾರೀ ಮಳೆಯಿಂದಾಗಿ ಉಕ್ಕಿ ಹರಿಯುತ್ತಿದೆ ಬಾಗ್ಮತಿ ನದಿ – ನೇಪಾಳದಲ್ಲಿ ಕಟ್ಟೆಚ್ಚರ, ವೀಡಿಯೋ ವೈರಲ್
ಕಳೆದ ಬಾರಿ ಬ್ರಾಂಡೆಡ್ ಕಂಪನಿಯ ಶೂ, ಎರಡು ಜೊತೆ ಸಾಕ್ಸ್ ವಿತರಣೆ ಮಾಡಲಾಗಿತ್ತು. ಈ ಬಾರಿ ಒಂದೇ ಜೊತೆ ಸಾಕ್ಸ್ ವಿತರಣೆ ಮಾಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಹಳೇ ಶೂಗಳನ್ನ ಹಾಕಿಕೊಂಡು ಬರುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕ್ವಾಲಿಟಿ ಶೂಸ್ನಲ್ಲಿ ಕಾಂಪ್ರಮೈಸ್ ಇಲ್ಲ. ಎಲ್ಲ ಸಿಇಓಗಳಿಗೂ ಪತ್ರ ಬರೆದು ವರದಿ ತರಿಸಿಕೊಂಡಿದ್ದೇನೆ. ಡೆಲಿವರಿಯಲ್ಲಿ ಸ್ವಲ್ಪ ಲೇಟ್ ಆಯ್ತು. ನಾನಾಗ ಮಿನಿಸ್ಟರ್ ಆಗಿರಲಿಲ್ಲ. ಮಕ್ಕಳಿಗೆ ಟೈಟ್ ಆದಾಗ ಚೇಂಜ್ ಮಾಡ್ತೀವಿ ಎಂದಿದ್ದಾರೆ.ಇದನ್ನೂ ಓದಿ: ಆಟೋಮೊಬೈಲ್ ಕ್ಷೇತ್ರದ ಟೆಸ್ಟಿಂಗ್ ಸೌಲಭ್ಯ ಅಭಿವೃದ್ಧಿಗೆ 780 ಕೋಟಿ ಮೀಸಲು:ಹೆಚ್ಡಿಕೆ
ಇತ್ತ ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾಲ್ಲೂಕಿನ ಬೆಡಸಗಾಂವ ಸರ್ಕಾರಿ ಹಿರಿಯ ಶಾಲೆಯ ವಿದ್ಯಾರ್ಥಿಗಳಿಗೆ ಕಳಪೆ ಪಾದರಕ್ಷೆ ವಿತರಿಸಲಾಗಿತ್ತು. ಅದಕ್ಕೆ ಅವುಗಳನ್ನು ಎಸೆದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಪಬ್ಲಿಕ್ ಟಿವಿ’ ವರದಿ ಬಳಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮರಳಿ ಪಡೆದು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಕಂಪನಿಗೆ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಭಯೋತ್ಪಾದನೆಗೆ ಪಿತೂರಿ ಪ್ರಕರಣ – ಚಿಕ್ಕಬಳ್ಳಾಪುರ ಪೊಲೀಸರಿಂದ ಮತ್ತೋರ್ವನ ಬಂಧನ

