ಬಿಗ್ಬಾಸ್ (Bigg Boss) ಮನೆಯಲ್ಲಿ ಜಗಳ, ಟಾಸ್ಕ್ ಅಖಾಡದ ನಡುವೆ ಈಗ ಎರಡು ಕಣ್ಣುಗಳು ಬೆರೆತು ಮಧುರ ಪ್ರೇಮಕಾವ್ಯವೊಂದು ಸದ್ದಿಲ್ಲದೆ ಆರಂಭವಾದಂತಿದೆ. ಜೈಲಿನ ಕಂಬಿಗಳ ನಡುವಿನ ಮಾತುಕತೆಯಿಂದ ಶುರುವಾದ ಸೌಂದರ್ಯ ಶೆಟ್ಟಿ (Soundarya Shetty) ಮತ್ತು ಯಶಸ್ (Yashas) ನಡುವಿನ ಕೆಮಿಸ್ಟ್ರಿ, ಈಗ ಮನೆಯಲ್ಲಿ ಗುಲಾಬಿ ಸುಗಂಧ ಹಬ್ಬಿಸಿದೆ.
ಸುದೀಪ್ ಆದೇಶದಂತೆ ಸೌಂದರ್ಯ ಶೆಟ್ಟಿ ಜೈಲು ಸೇರಿದ್ದಾರೆ. ಜೈಲಿನ ಹೊರಗಡೆ ನಿಂತಿದ್ದ ಯಶಸ್ಗೆ ಸೌಂದರ್ಯ, ನಾನು ಜೈಲಿನಲ್ಲಿ ಇದ್ರೆ ನನ್ನ ನೋಡೋಕೆ ಬರ್ತೀರಾ? ಎಂದು ಕೇಳುತ್ತಾರೆ. ಅದಕ್ಕೆ ಈಗ ಎಲ್ಲಿದ್ಯಾ? ಎಂದು ಯಶಸ್ ಕೇಳಿದ ಪ್ರಶ್ನೆಗೆ, ನಿನ್ನ ಮನಸ್ಸಿನಲ್ಲಿದ್ದೇನೆ ಎಂದು ಸೌಂದರ್ಯ ತರಲೆ ಉತ್ತರ ಕೊಡುತ್ತಾರೆ. ಇದನ್ನೂ ಓದಿ: ʻಹೂʼ ಕೇಳಿದ ಶಾಸ್ತ್ರಿಗೆ ʻWho’ ಅಂದ್ಲು ದೊಡ್ಮನೆ ದೇವಿ
ಇಲ್ನೋಡಿ, ‘ಯಶಸ್’ ಕೈಯಲ್ಲಿರುವ ಗುಲಾಬಿಯ ‘ಸೌಂದರ್ಯ’ ಹೆಚ್ಚಾಗಿದೆ!
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKPromo pic.twitter.com/QI07F7miTh
— Colors Kannada (@ColorsKannada) September 23, 2026
ಅಲ್ಲಿಂದ ಏನಾಯ್ತೋ… ಯಶಸ್ ಮಾತ್ರ ಜೈಲಿನ ಸುತ್ತನೇ.. ಅಲ್ಲ ಸೌಂದರ್ಯ ಸುತ್ತನೇ ತಿರುಗುತ್ತಿದ್ದಾರೆ. ಜೈಲಿನ ಪಕ್ಕದಲ್ಲಿ ಡಿಪ್ಸ್ ಹೊಡೆಯುತ್ತಾ ಹೀರೋ ಫೋಸ್ ಕೊಟ್ಟಿದ್ದಾರೆ. ಅದಕ್ಕೆ ಸೌಂದರ್ಯ ಹೀರೋ ಆಗಿ ಕಾಣಿಸಿಕೊಂಡು ಏನು ಪ್ರಯೋಜನ? ಅಂತಾರೆ. ಅದಕ್ಕೆ ಯಶಸ್ ಜತೆಗೊಬ್ರು ಹೀರೋಯಿನ್ ಇರಬೇಕಲ್ವಾ? ಎಂದು ಲವ್ ಕಹಾನಿ ಶುರುವಾಗುತ್ತದೆ. ಜೈಲಿನಲ್ಲಿದ್ದ ಸೌಂದರ್ಯ ಹೊರಕ್ಕೆ ಕೈಚಾಚಿ.. ಯಶಸ್ ಜೈಲಿನೊಳಗೆ ಕೈಚಾಚಿದಾಗ ಇಬ್ಬರ ಕೈತಾಗದೇ ಮಗಧೀರ ಸಿನಿಮಾ ತರ ಲವ್ ಫೀಲ್ ಕೊಟ್ಟಿದ್ದಾರೆ.

ಇದರ ನಡುವೆ ಬಿಗ್ಬಾಸ್ ಟಾಸ್ಕ್ವೊಂದನ್ನು ಕೊಟ್ಟಿದ್ದು, ಪುರುಷರೆಲ್ಲರೂ ಗುಲಾಬಿ ಹೂ ಹಿಡಿದು ನಿಂತಿರುತ್ತಾರೆ. ಈ ಪೈಕಿ ಬಿಗ್ಬಾಸ್ ಹೇಳುವಂತೆ ನಿಮಗಿಷ್ಟವಾದ ಯಾರಾದರೊಬ್ಬರ ಕೈಯಿಂದ ಗುಲಾಬಿ ತೆಗೆದುಕೊಳ್ಳಬೇಕು. ಆಗ ಸೌಂದರ್ಯ ನಾಚಿಕೆಯಿಂದ ಯಶಸ್ ಕೈಯಿಂದ ಗುಲಾಬಿ ಪಡೆದುಕೊಂಡಿದ್ದು, ಮನೆಯಲ್ಲಿ ಹೊಸ ಅಧ್ಯಾಯ ಶುರುವಾದಂತಿದೆ.ಇದನ್ನೂ ಓದಿ: ಮಂಜು ಅಲ್ಲ, ಶಾಸ್ತ್ರೀನೂ ಅಲ್ಲ.. ಬಿಗ್ಬಾಸ್ನಲ್ಲಿ ಮಿಡ್ವೀಕ್ ಎಲಿಮಿನೇಶನ್ ಫಿಕ್ಸ್!

