ನೆಲಮಂಗಲ: ಮಿಲಿಟರಿ ಕ್ವಾಟ್ರಸ್‌ಗೆ ಸಾಮಗ್ರಿಗಳನ್ನು ತರಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಲಾರಿ ಚಕ್ರಕ್ಕೆ ಸಿಲುಕಿ ಯೋಧ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಲಕ್ಕೂರು ಬಳಿ ಅಪಘಾತ ನಡೆದಿದೆ. ಪ್ರಿನ್ಸಿಪಲ್ ಸಿಂಗ್ (35) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಯೋಧ. ಇದನ್ನೂ ಓದಿ: ನಾಲೆಯಲ್ಲಿ ನವವಿವಾಹಿತೆ ಕಣ್ಮರೆ – ಪತಿ ವಿರುದ್ಧ ಕೊಲೆ ಆರೋಪ
ಪಂಜಾಬ್ ಮೂಲದ ಸಿಂಗ್, ದಾಬಸ್ ಪೇಟೆಯಲ್ಲಿ ಸಿಐಎಸ್ಎಫ್ ಕ್ವಾಟ್ರಸ್‌ನಲ್ಲಿ ವಾಸವಿದ್ದರು. ಸಿಐಎಸ್‌ಎಫ್‌ನಲ್ಲಿ ಕಾನ್‌ಸ್ಟೇಬಲ್ ರ‍್ಯಾಂಕ್‌ನ ಯೋಧರಾಗಿದ್ದರು. ಇಲಾಖೆಗೆ ಎಲೆಕ್ಟ್ರಿಕ್ ಸಾಮಗ್ರಿ ತರಲು ದಾಬಸ್ ಪೇಟೆಗೆ ಪ್ರಿನ್ಸಿಪಲ್ ಸಿಂಗ್ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಲಾರಿ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಲಾರಿ ಚಕ್ರಕ್ಕೆ ಸಿಲುಕಿದ ಯೋಧ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಗಾರಕ್ಕೆ ಮೃತದೇಹ ರವಾನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವ ಅನ್ನದಾನಕ್ಕೆ ಮಾಡಿದ್ದ ಸಾಂಬಾರ್‌ಗೆ ಬಿದ್ದು ಮಹಿಳೆ ಸಾವು – ಸಿಸಿಟಿವಿಯಲ್ಲಿ ದೃಶ್ಯ ಸೆರೆ

