ಬೆಂಗಳೂರು: ವಿಧಾನಸಭೆ ಕಲಾಪ ಮುಗಿಸಿ ನಿರ್ಗಮಿಸುತ್ತಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ವಿಧಾನಸೌಧ ಡಿಸಿಪಿ ಯೋಗೇಶ್ (DCP Yogesh) ಮೇಲೆ ಗರಂ ಆಗಿದ್ದಾರೆ.
ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮೆಟ್ಟಿಲು ಇಳಿದು ಬಂದು ಕಾರು ಹತ್ತಲು ಸಿದ್ದರಾಮಯ್ಯ ತೆರಳಿದ್ದರು. ಆದರೆ, ಕೆಂಗಲ್ ದ್ವಾರದ ಬಳಿ ನಿಲ್ಲಿಸಿದ್ದ ಅವರ ಕಾರನ್ನು ಡಿಸಿಪಿ ಯೋಗೇಶ್ ಅಲ್ಲಿಂದ ತೆಗೆಸಿ ಪಾರ್ಕಿಂಗ್ಗೆ ಕಳುಹಿಸಿದ್ದರು. ಹೀಗಾಗಿ ಕೆಂಗಲ್ ದ್ವಾರದ ಬಳಿ ಸಿದ್ದರಾಮಯ್ಯ ಕಾರಿಗಾಗಿ ಕಾಯಬೇಕಾಗಿತ್ತು. ಇದನ್ನೂ ಓದಿ: SIM ಕಾರ್ಡ್ ದುರ್ಬಳಕೆ ಮಾಡಿದ್ರೆ 50 ಲಕ್ಷ ದಂಡ, 3 ವರ್ಷ ಜೈಲು – ನೀವು ತಿಳಿಯಬೇಕಾಗಿದ್ದು ಏನು?
ಕಾರು ಅಲ್ಲಿಲ್ಲದಿರುವುದನ್ನು ಕಂಡು ಆಕ್ರೋಶಗೊಂಡ ಸಿದ್ದರಾಮಯ್ಯ ಅವರು, ತಕ್ಷಣವೇ ಡಿಸಿಪಿ ಯೋಗೇಶ್ ಅವರನ್ನು ಕರೆದು ಯಾಕೆ ಕಾರು ತೆಗೆಸಿದ್ದು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದೇ ವೇಳೆ ನಿನ್ನ ಮೇಲೆ ಬಹಳ ಆರೋಪಗಳಿವೆ, ಶಾಸಕರನ್ನ ಸರಿಯಾಗಿ ನಡೆಸಿಕೊಳ್ತಿಲ್ಲ ಎಂಬ ದೂರುಗಳಿವೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕಿಡಿಕಾರಿದ್ದಾರೆ. ಕಾರು ತೆಗೆಸಿದ್ದಕ್ಕೆ ಸಿದ್ದರಾಮಯ್ಯ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೂ ವಿಚಾರ ಮುಟ್ಟಿಸಿ ಕಿಡಿಕಾರಿದ್ದಾರೆ. ಕೊನೆಗೆ ಡಿಸಿಪಿ ಯೋಗೇಶ್ ಅವರು ಸಾರಿ ಸರ್ ಎಂದು ಕ್ಷಮೆ ಕೋರಿದ್ದಾರೆ.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಹಾಗೂ ಮಾಜಿಯಾದ ಬಳಿಕವೂ ಅವರಿಗೆ ಮಂಡಿ ನೋವಿರುವ ಕಾರಣದಿಂದಾಗಿ ವಿಧಾನಸೌಧದ ಪಶ್ಚಿಮ ದ್ವಾರದ ಸಮೀಪದಲ್ಲಿಯೇ ಕಾರನ್ನು ಪಾರ್ಕ್ ಮಾಡಲಾಗುತ್ತಿತ್ತು. ಸಿದ್ದರಾಮಯ್ಯ ವಿಧಾನಸೌಧದಿಂದ ಹೊರಬಂದ ಕೂಡಲೇ ಕಾರು ಹತ್ತಿ ತೆರಳುತ್ತಿದ್ದರು. ಆದರೆ ಇಂದು ಕಾರು ಯಾವಾಗಲೂ ನಿಲ್ಲುತ್ತಿದ್ದ ಜಾಗದಲ್ಲಿ ಇರದ ಕಾರಣ ಕೆಲ ನಿಮಿಷ ಮೆಟ್ಟಿಲುಗಳ ಬಳಿ ಕಾದಿದ್ದರು. ಈ ಕಾರಣಕ್ಕೆ ಸಿಟ್ಟಾಗಿ ಯೋಗೇಶ್ ಮೇಲೆ ಗರಂ ಆಗಿದ್ದಾರೆ.ಇದನ್ನೂ ಓದಿ: ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಚಿನ್ನ – ಮಹಿಳಾ ಕ್ರಿಕೆಟ್ ತಂಡಕ್ಕೆ ಸತತ 2ನೇ ಪದಕ

