ಕೊಪ್ಪಳ: ಕೋತಿ (Monkey) ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲಿಯೇ ವೃದ್ಧೆ ಮೃತಪಟ್ಟಿರುವ ಘಟನೆ ಕೊಪ್ಪಳದ (Koppal) ಬಿ.ಟಿ ಪಾಟೀಲ್ ನಗರದಲ್ಲಿ ನಡೆದಿದೆ.
ನಜಮುನಿಸಾ ಬೇಗಂ (91) ಮೃತಪಟ್ಟ ವೃದ್ಧೆ. ನಜಮುನಿಸಾ ಬೇಗ್ಂ ಮನೆ ಮುಂದೆ ನಿಂತುಕೊಂಡಿದ್ದರು. ಈ ವೇಳೆ ನಜಮುನಿಸಾ ಬೇಗಂ ಮೇಲೆ ಕೋತಿ ದಾಳಿ ನಡೆಸಿ ತಳ್ಳಿದೆ. ಈ ಪರಿಣಾಮ ನಜಮುನಿಸಾ ಬೇಗಂ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಬೇಡ ಎಂದರ್ಥ: ಶಿವಲಿಂಗೇಗೌಡ ಸ್ಪಷ್ಟನೆ
ನಜಮುನಿಸಾ ಬೇಗಂ ಅವರನ್ನು ಎಬ್ಬಿಸಲು ಬಂದ ಮಹಿಳೆಯ ಮೇಲೂ ಕೋತಿ ದಾಳಿ ನಡೆಸಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪರಿಷತ್ನಲ್ಲಿ 2 ಚರಣಕ್ಕೆ ವಂದೇ ಮಾತರಂ ಹಾಡೋದನ್ನು ನಿಲ್ಲಿಸಿದ ಕಾಂಗ್ರೆಸ್ ನಾಯಕರು – ಬಿಜೆಪಿ ಆಕ್ರೋಶ


