ಬೆಂಗಳೂರು: ರಾಜ್ಯದಲ್ಲಿ ವಂದೇ ಮಾತರಂ (Vande Mataram) ಸಮರ ತಾರಕಕ್ಕೇರುವ ಲಕ್ಷಣ ಕಾಣ್ತಿದೆ. ನಾಳೆಯ (ಸೆ.21) ಅಧಿವೇಶನದಲ್ಲಿ ವಂದೇ ಮಾತರಂ ಸಂಪೂರ್ಣವಾಗಿ ಹಾಡಬೇಕು. ನಾವು ಪೂರ್ತಿ ವಂದೇ ಮಾತರಂ ಹಾಡೇ ಹಾಡ್ತೀವಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಸವಾಲು ಹಾಕಿದ್ದಾರೆ.
ಬೆಂಗಳೂರಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ, ನಮ್ಮ ರಕ್ತದ ಕಣ ಕಣದಲ್ಲೂ ವಂದೆ ಮಾತರಂ ಗೀತೆ ಇದೆ. ಡಿಕೆಯಂತಹ ನೂರು ಜನ ಡಿ.ಕೆ ಶಿವಕುಮಾರ್ (D.K Shivakumar) ಬಂದರೂ ನಾವು ಹಾಡೇ ಹಾಡ್ತೀವಿ. ನಾನು ಪೂರ್ತಿ ವಂದೇ ಮಾತರಂ ಹಾಡ್ತೀನಿ. ಕೇಸು ಹಾಕಿ ನೋಡೋಣ ಎಂದಿದ್ದಾರೆ. ಇದನ್ನೂ ಓದಿ: ಕಸ್ತೂರಿ ರಂಗನ್ ವರದಿ ವಿರುದ್ಧ ನಿರ್ಣಯಕ್ಕೆ ಸರ್ಕಾರದ ಸಜ್ಜು, ಕಲಾಪ ವಿಸ್ತರಣೆಗೆ ಬಿಜೆಪಿ ಪಟ್ಟು
ಮಸೀದಿಗಳಿಂದ ದಿನ ಬೆಳಗ್ಗೆ ಅಲ್ಲಾಹು ಅಕ್ಬರ್ ಅಂತ ಕೂಗ್ತಾನೆ ಇರ್ತಾರೆ. ಅಲ್ಲಾ ಒಬ್ಬನೇ ದೇವರು ಅಂತ ನಾವು ಕೇಳಿಸಿಕೊಳ್ಳಬೇಕು. ನಾವು ಮಾ ದುರ್ಗೆ ಅಂತ ಹೇಳಿದ್ರೆ ಕಾಂಗ್ರೆಸ್ನವರಿಗೆ ಕೇಳಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ದೇಶಕ್ಕೆ ದ್ರೋಹ ಬಗೆಯುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಈ ಮಧ್ಯೆ, ತೀರ್ಥಹಳ್ಳಿಯಲ್ಲಿ ನಡೆದ ಸಿಎಂ ಕಾರ್ಯಕ್ರಮದಲ್ಲಿ ವಂದೇ ಮಾತರಂ ವಿವಾದ ನಡೆದಿದ್ದಕ್ಕೆ ಇವತ್ತಿನ ಸಕಲೇಶಪುರ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡಲಿಲ್ಲ. ಇದನ್ನೂ ಓದಿ: ಟ್ರಾಫಿಕ್ ಕಿಯೋಸ್ಕ್ನಲ್ಲಿ ಕೂತು ಪೊಲೀಸರು ಮೊಬೈಲ್ ವಿಡಿಯೋ ನೋಡ್ತಾರೆ: ಬೆಂಗಳೂರು ಟ್ರಾಫಿಕ್ಗೆ ಮೋಹನ್ ದಾಸ್ ಪೈ ಬೇಸರ

