ಬಿಹಾರ ಶಾಸಕಿ ಹಾಗೂ ಗಾಯಕಿ ಮೈಥಿಲಿ ಠಾಕೂರ್ ಅವರ ಐಷಾರಾಮಿ ರೋಲ್ಸ್ ರಾಯ್ಸ್ ಕಲ್ಲಿನನ್ ಕಾರಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ಕೇಳಿಬಂದಿವೆ. ಈ ಬೆನ್ನಲ್ಲೇ ಬಿಜೆಪಿ ಸಂಸದೆ ಕಂಗನಾ ರಣಾವತ್ ಟೀಕೆಗಳ ವಿರುದ್ಧ ಕಿಡಿಕಾರಿದ್ದಾರೆ.
ಮೈಥಿಲಿ ಠಾಕೂರ್ ಇತ್ತೀಚೆಗೆ ಮುಂಬೈನ ಲಾಲ್‌ಬಾಗ್ಚಾ ರಾಜ ಪಂಡಲ್‌ಗೆ ನೀಲಿ ಬಣ್ಣದ ಐಷಾರಾಮಿ ಎಸ್‌ಯುವಿಯಲ್ಲಿ ಬಂದಿದ್ದರು. ವಿಡಿಯೋ ವೈರಲ್ ಆದ ಬೆನ್ನಲ್ಲೇ, ರಾಜಕೀಯಕ್ಕೆ ಬಂದ ಬಳಿಕ ಇಷ್ಟು ದುಬಾರಿ ಕಾರನ್ನು ಹೇಗೆ ಖರೀದಿಸಲು ಸಾಧ್ಯವಾಯಿತು ಎಂಬ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿವೆ.
ಈ ಟೀಕೆಗಳ ಬಗ್ಗೆ ಕಂಗನಾ ರಣಾವತ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ರಾಜಕಾರಣಿಗಳು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರು ಐಶಾರಾಮಿ ಜೀವನಶೈಲಿಯನ್ನು ಏಕೆ ತ್ಯಜಿಸಬೇಕು ಎಂದು ಕಂಗನಾ ಪ್ರಶ್ನಿಸಿದ್ದಾರೆ.ಇದನ್ನೂ ಓದಿ: ವಿಜಯಪುರದಲ್ಲಿ ವ್ಯಕ್ತಿಯ ಮೇಲೆ ಗುಂಡಿನ ದಾಳಿ
“ರಾಜಕಾರಣಿಗಳು ಉತ್ತಮ ಜೀವನ ನಡೆಸುವುದನ್ನು ನೋಡಿದಾಗಲೆಲ್ಲಾ ಕೆಲವರು ಕಿಡಿಕಾರಲು ಪ್ರಾರಂಭಿಸುತ್ತಾರೆ. ಈಗ ನಮ್ಮ ಯುವ ಶಾಸಕಿ ಐಷಾರಾಮಿ ಕಾರು ಬಳಸಿದ್ದಕ್ಕಾಗಿ ಟ್ರೋಲ್ ಆಗುತ್ತಿದ್ದಾರೆ. ನಾವು ಸಮಾಜ ಸೇವೆಗೆ ಒಲವು ತೋರಬಹುದು. ಆದರೆ, ನಮಗೆ ನಮ್ಮದೇ ಆದ ವೃತ್ತಿ, ಜೀವನ ಮತ್ತು ಜನಪ್ರಿಯತೆಯೂ ಇದೆ. ನಾವು ನಿಸ್ವಾರ್ಥವಾಗಿ ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇವೆ. ಆದರೆ, ಕೆಲವರು ನಾವು ಚೆನ್ನಾಗಿ ಬದುಕುವುದನ್ನು ನೋಡಿದರೆ ತುಂಬಾ ನೋವಾಗುತ್ತದೆ, ಏಕೆ? ನಾವೂ ಚೆನ್ನಾಗಿ ಬದುಕಲು ಸಾಧ್ಯವಿಲ್ಲವೇ? ನಮಗೆ ಸಾರ್ವಜನಿಕ ಹಣದಲ್ಲಿ ಆಸಕ್ತಿ ಇಲ್ಲ. ಆದರೆ, ನಾವು ಬಡವರಾಗಿ ಮತ್ತು ನಿರ್ಜೀವವಾಗಿ ಉಳಿಯಬೇಕೆಂದು ನಿರೀಕ್ಷಿಸುವುದು ಒಳ್ಳೆಯದಲ್ಲ” ಎಂದು ಕಂಗನಾ ಬರೆದಿದ್ದಾರೆ. ಇದನ್ನೂ ಓದಿ: ಮಂಜನಿಗೆ ಹೊಡೆದು ಜೈಲಿಗೆ ಹೋದ ಸೌಂದರ್ಯ ಶೆಟ್ಟಿ

