– AI ಕುರಿತ ಆತಂಕಕಾರಿ ಹೇಳಿಕೆಗಳ ಹೊತ್ತಲ್ಲೇ ಅಚ್ಚರಿ ಮೂಡಿಸಿದ ಟ್ರಂಪ್ ಘೋಷಣೆ
ವಾಷಿಂಗ್ಟನ್: ಅಮೆರಿಕ-ಚೀನಾ ನಡುವಿನ ಕೃತಕ ಬುದ್ಧಿಮತ್ತೆ (AI) ಸ್ಪರ್ಧೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ, ಹೊಸ ‘AI ಝಾರ್’ (AI ಮುಖ್ಯಸ್ಥ) ಮತ್ತು ‘AI ಪಡೆ’ಯನ್ನು ರಚಿಸುವ ಯೋಜನೆಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ.
ಟ್ರೂತ್ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಟ್ರಂಪ್ ಈ ಘೋಷಣೆ ಮಾಡಿದ್ದು, ಸಂಭಾವ್ಯ ತಪ್ಪುಗಳನ್ನು ಪರಿಹರಿಸಲು ಅಸ್ತಿತ್ವದಲ್ಲಿರುವ ಕ್ರಿಮಿನಲ್ ಮತ್ತು ನಾಗರಿಕ ನ್ಯಾಯ ವ್ಯವಸ್ಥೆಗಳನ್ನು ಬಳಸಿಕೊಂಡು ತಮ್ಮ ಆಡಳಿತವು AI ಉದ್ಯಮದ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೆಚ್1ಬಿ ವೀಸಾ; ಉದ್ಯೋಗದಾತರಿಗೆ 1 ಲಕ್ಷ ಡಾಲರ್ ಶುಲ್ಕ ಮುಂದುವರಿಕೆ
ಈ ಅದ್ಭುತ ಉದ್ಯಮದ ಬೆಳವಣಿಗೆಗೆ ನಾವು ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದಿಲ್ಲ ಅಥವಾ ಅದನ್ನು ಕುಂಠಿತಗೊಳಿಸುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಅದು ಬೆಳೆಯುತ್ತಿದ್ದಂತೆ ನಾವು ಅದನ್ನು ಪೋಷಿಸುತ್ತೇವೆ, ಅದಕ್ಕೆ ಸಹಾಯ ಮಾಡುತ್ತೇವೆ ಮತ್ತು ಅದರ ಮೇಲೆ ನಿಗಾ ಇಡುತ್ತೇವೆ ಎಂದು ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಕ್ಷೇತ್ರದಲ್ಲಿ ಪ್ರಾಬಲ್ಯಕ್ಕಾಗಿ ಅಮೆರಿಕ ಮತ್ತು ಚೀನಾ ನಡುವೆ ಪೈಪೋಟಿ ನಡೆಯುತ್ತಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಡೆಯಲಿರುವ ಸಭೆಗೂ ಮುನ್ನ ಟ್ರಂಪ್ ಈ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಮೇಲೆ 100% ಸುಂಕ ವಿಧಿಸುವ ಮಸೂದೆಗೆ ಟ್ರಂಪ್ ಸಹಿ
ಜಾಗತಿಕ ಮಟ್ಟದಲ್ಲಿ ಎಐ ವಿಸ್ತರಿಸುತ್ತಿರುವುದನ್ನು ನೋಡಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಮನುಕುಲಕ್ಕೆ ಎಐನಿಂದ ದೊಡ್ಡ ಅಪಾಯವಿದೆ ಎಂದು ಎಚ್ಚರಿಸುತ್ತಿದ್ದಾರೆ. ಈ ಹೊತ್ತಿನಲ್ಲೇ ಟ್ರಂಪ್ ಘೋಷಣೆ ಕತೂಹಲ ಮೂಡಿಸಿದೆ.

