ನವದೆಹಲಿ: ಗ್ಯಾಸ್ ಬಳಕೆದಾರರಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಶಾಕ್ ನೀಡಿದೆ. ದೇಶಾದ್ಯಂತ 3.16 ಕೋಟಿ ಜನರಿಗೆ ಗ್ಯಾಸ್ ಕನೆಕ್ಷನ್ ಬ್ಲಾಕ್ ಮಾಡಲಾಗಿದೆ.
ಗ್ಯಾಸ್ ಬಳಕೆದಾರರಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ ಮಾಡಲಾಗಿತ್ತು. ಎರಡೆರಡು ಬಾರಿ ಅವಧಿ ವಿಸ್ತರಣೆ ಮಾಡಿ ಆಧಾರ್ ಬಯೋಮೆಟ್ರಿಕ್‌ಗೆ ಅವಕಾಶ ನೀಡಲಾಗಿತ್ತು.
ಎರಡು ಬಾರಿ ಅವಕಾಶ ಕೊಟ್ಟರೂ 3.16 ಕೋಟಿ ಗ್ರಾಹಕರು ಆಧಾರ್ ಬಯೋಮೆಟ್ರಿಕ್ ಕೊಟ್ಟಿಲ್ಲ. 3.16 ಕೋಟಿ ಗೃಹಬಳಕೆ ಗ್ಯಾಸ್ ಬಳಕೆದಾರರಿಗೆ ಇಂದಿನಿಂದ ಗ್ಯಾಸ್ ಸಪ್ಲೈ ಇರುವುದಿಲ್ಲ.
ಸಬ್ಸಿಡಿ ಅಡಿ ಗ್ಯಾಸ್ ಬೇಡ ಅನ್ನುವವರು ಮಾರುಕಟ್ಟೆ ದರದಲ್ಲಿ ಗ್ಯಾಸ್ ಪಡೆಯುತ್ತೇವೆ ಅಂತಾ ಘೋಷಿಸಿಕೊಳ್ಳಬೇಕು. Omc portal ಮೊಬೈಲ್ ಆ್ಯಪ್‌ನಲ್ಲಿ ಮಾರುಕಟ್ಟೆ ದರದಲ್ಲಿ ಗ್ಯಾಸ್ ಪಡೆಯುತ್ತೇವೆ ಅಂತಾ ಘೋಷಣೆ ಮಾಡಿಕೊಳ್ಳಬೇಕಾಗಿದೆ. ಆಧಾರ್ ಬಯೋಮೆಟ್ರಿಕ್ ನೀಡದಿದ್ದವರಿಗೆ ಗ್ಯಾಸ್ ರಿಫಿಲ್ ಇಲ್ಲ. ಗ್ಯಾಸ್ ಸಂಪರ್ಕ ಕಟ್ ಮಾಡಲು ತೈಲ ಕಂಪನಿಗಳಿಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸೂಚನೆ ನೀಡಿದೆ.

