ಬಿಗ್‌ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳು ಎರಡನೇ ವಾರಕ್ಕೆ ಕಾಲಿಡುತ್ತಿದ್ದಂತೆ ಕೊತ ಕೊತ ಅಂತ ಕುದಿಯುತ್ತಿದೆ. ಸೌಂದರ್ಯ ಶೆಟ್ಟಿ ಹಾಗೂ ಮಂಜು ನಡುವಿನ ಜಗಳ ತಣ್ಣಗಾಗುವಷ್ಟರಲ್ಲೇ ಇದೀಗ ಮಂಜ (Manja) ಹಾಗೂ ಅವಿನಾಶ್ (Avinash) ನಡುವೆ ವಾರ್ ಶುರುವಾಗಿದೆ. ಮಂಜುವಿನ ಆಟ, ಮಾತಿನ ಶೈಲಿ ಸಹಿಸದೇ ಅವಿನಾಶ್ ಮನೆಯಿಂದಲೇ ಆಚೆ ಹೋಗೋಕೆ ಸಿದ್ಧವಾಗಿದ್ದಾರೆ.
ದೊಡ್ಮನೆಯಲ್ಲಿ ರಾತ್ರಿ ಅಡುಗೆ ಮಾಡಿ ತಿನ್ನೋದು, ಮೊಟ್ಟೆ ವಿಚಾರವಾಗಿ ಸ್ಪರ್ಧಿಗಳ ನಡುವೆ ಭೀಕರ ಜಗಳ ನಡೆದಿದೆ. ಅವಿನಾಶ್ ಹಾಗೂ ಮಂಜು ಅವರ ನಡುವೆ ವಾಗ್ವಾದ ತಾರಕಕ್ಕೇರಿದ್ದು, ಪರಸ್ಪರ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ತಲುಪಿದೆ.ಇದನ್ನೂ ಓದಿ:ಬಿಗ್ ಬಾಸ್ ಮನೆಯ ಮೊದಲ ಪೈಲಟ್ ಆದ ಸಂಗೀತಾ
ಮಂಜು ಟಾಂಟ್ ಕೊಟ್ಟು ಮಾತನಾಡುವ ಶೈಲಿ ಹಾಗೂ ಊಟದ ವಿಚಾರ, ರಾತ್ರಿ ಮೊಟ್ಟೆ ತಿಂದಿರುವುದು ಇದೆಲ್ಲವೂ ಅವಿನಾಶ್ ಅವರನ್ನು ವಿಪರೀತವಾಗಿ ಕೆದಕಿದೆ. ಇದನ್ನು ಸಹಿಸಲಾಗದೇ ಅವಿನಾಶ ನಾನು ಮನೆಯಲ್ಲಿ ಇರಲ್ಲ. ಇವರೆಲ್ಲರ ಮಧ್ಯೆ ನನಗೆ ಇರೋಕಾಗಲ್ಲ ಎಂದು ಬಿಗ್‌ಬಾಸ್ ಬಳಿ ಕನ್ಫೆಶನ್ ರೂಮ್‌ನ ಬಾಗಿಲು ತೆರೆಯುವಂತೆ ಮನವಿ ಮಾಡಿಕೊಂಡಿದ್ದಾರೆ.
ಅವಿ’ನಾಶ’ ಕೋಪ ಯಾವುದರ ನಾಶದ ಮುಂಸೂಚನೆ?
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್‌ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq#BBK13 #ColorsKannada #ಕಲರ್‌ಫುಲ್‌ಕತೆ #colorfulstory #KichchaSudeepa #CKPromo pic.twitter.com/1kvZnRFXKp
— Colors Kannada (@ColorsKannada) September 17, 2026
ಮಂಜು ಹಾಗೂ ಅವಿನಾಶ್ ನಡುವೆ ಮಾತಿಗೆ ಮಾತು ಬೆಳೆದು, ನಿನ್ನ ಮುಖ ನೋಡೋಕೂ ಯೋಗ್ಯತೆ ಇಲ್ಲ, ಅಸಹ್ಯ ನೀನು. ಹೊಟ್ಟೆಗೆ ಅನ್ನ ತಿನ್ನೋರಾದ್ರೆ ಒಂದ್ಸಲ ಹೇಳಿದ್ರೆ ಅರ್ಥ ಆಗುತ್ತೆ ಎಂದು ಅವಿನಾಶ್ ಕಿಡಿಕಾರಿದರೆ, ಅನರ್ಹ, ಅಯೋಗ್ಯ ಎಂದು ಮಂಜ ಎದುರಾಗಿ ಆಕ್ರೋಶ ಹೊರಹಾಕಿದ್ದು, ಮಾತಿನ ವಾರ್ ನಡೆದಿದೆ..
ಕೊನೆಗೆ ಅವಿನಾಶ್ ತಾಳ್ಮೆ ಕಳೆದುಕೊಂಡು, ನಿಜ ಹೊಡಿತೀನಿ ಎಂದು ಆವೇಶದಿಂದ ಕೂಗಾಡಿದ್ದಾರೆ. ಇದಕ್ಕೆ ಮಂಜ ನೇರವಾಗಿ ಸವಾಲು ಹಾಕಿದ್ದಾರೆ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಅವಿನಾಶ್ ಬಾಗಿಲು ಹಾಗೂ ಗೋಡೆಗೆ ಕೈಯಿಂದ ಜೋರಾಗಿ ಗುದ್ದಿ ರೋಷಾವೇಶ ಪ್ರದರ್ಶಿಸಿದ್ದಾರೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ, ಬಿಗ್‌ಬಾಸ್ ಅವಿನಾಶ್ ಅವರನ್ನು ಕನ್ಫೆಶನ್ ರೂಮ್‌ಗೆ ಬರುವಂತೆ ತಿಳಿಸಿದ್ದಾರೆ. ಇದನ್ನೂ ಓದಿ:30 ಕೆಜಿ.. 86 ಕೆಜಿ ಮಾಂಸದ ಜಗಳಕ್ಕೆ ಬ್ರೇಕ್ – ಕಾಳಗಕ್ಕಿಳಿದಿದ್ದ ಮಂಜ, ಸೌಂದರ್ಯ ಈಗ ಕೂಲ್ ಫ್ರೆಂಡ್ಸ್

