ಬೆಂಗಳೂರು: ರಸ್ತೆಬದಿ ನಿಲಿಸಿದ್ದ ಬಿಡಾಡಿ ವಾಹನಗಳಿಂದ ವಿರುದ್ಧ ಜಿಬಿಎ (GBA) ಕಠಿಣ ಕ್ರಮ ಕೈಗೊಂಡಿದ್ದು, ಈ ಮೂಲಕ ಲಕ್ಷ ಲಕ್ಷ ದಂಡ ವಸೂಲಿ ಮಾಡಿದೆ.
ಬಿಡಾಡಿ ವಾಹನಗಳಿಗೆ ನೋಟಿಸ್ ಅಂಟಿಸಿ ಟೋಯಿಂಗ್ ಮಾಡುತ್ತಿದ್ದ ಜಿಬಿಎ, ನೋಟಿಸ್ ಅಂಟಿಸಿದ್ದ ವಾಹನಗಳಿಗೆ ದಂಡ ಹಾಕಿದೆ. ಜಿಬಿಎ ಒಟ್ಟು 8,641 ಬಿಡಾಡಿ ವಾಹನಗಳನ್ನ ಗುರುತು ಮಾಡಿತ್ತು. ಈ ಪೈಕಿ 2,122 ವಾಹನಗಳಿಗೆ ನೋಟಿಸ್ ಅಂಟಿಸಿತ್ತು. ಇದರಲ್ಲಿ 1,024 ವಾಹನಗಳ ಮಾಲೀಕರು ದಂಡ ಕಟ್ಟಿ, ತಮ್ಮ ವಾಹನವನ್ನು ಬಿಡಿಸಿಕೊಂಡಿದ್ದರು. ಇದನ್ನೂ ಓದಿ: ರಾಜ್ಯ ಬಿಜೆಪಿ ಬಲವರ್ಧನೆಗೆ ಮಾಸ್ಟರ್ ಪ್ಲ್ಯಾನ್ ರೆಡಿ – ಉಚ್ಚಾಟಿತರು, ಕಾಂಗ್ರೆಸ್‌ನ ಹಾಲಿ, ಮಾಜಿ ಶಾಸಕರ ಮರಳಿ ಕರೆತರಲು ಚಿಂತನೆ
ಜಿಬಿಎ ಒಂದು ವಾಹನಕ್ಕೆ 500 ರೂ. ದಂಡ ಫಿಕ್ಸ್ ಮಾಡಿತ್ತು. ಈ ಮೂಲಕ ಒಟ್ಟು 5.45 ಲಕ್ಷ ರೂ. ದಂಡ ವಸೂಲಿ ಮಾಡಿದೆ.
ಇನ್ನುಳಿದ ಬಿಡಾಡಿ ವಾಹನಗಳನ್ನ ಗುರುತು ಮಾಡಿರುವ ಜಾಗದಲ್ಲಿ ಪಾರ್ಕ್ ಮಾಡಲಾಗಿದ್ದು, ವಾಹನ ಸವಾರರು ದಂಡ ಕಟ್ಟಿ ತಮ್ಮ ವಾಹನಗಳನ್ನು ಬಿಡಿಸಿಕೊಂಡು ಹೋಗಬಹುದು ಎಂದು ತಿಳಿಸಲಾಗಿದೆ.

