– ಪಾಲಿಕೆ ಸಿಬ್ಬಂದಿಯಿಂದ ತೆರವು
ಕಲಬುರಗಿ: ನಗರದ (Kalaburagi) ಹೈಕೋರ್ಟ್ ಕ್ರಾಸ್ ಬಳಿ ರಾತ್ರೋ ರಾತ್ರಿ ಗುಂಪೊಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಿದ್ದು, ಅದನ್ನು ಮಹಾನಗರ ಪಾಲಿಕೆ ಸಿಬ್ಬಂದಿ ತೆರವು ಮಾಡಿದ್ದಾರೆ.
ಯಾವುದೇ ಅನುಮತಿ ಪಡೆಯದೆ ಏಳೆಂಟು ಜನರ ಗುಂಪು ಸೆ.16 ರಂದು ರಾತ್ರೋ ರಾತ್ರಿ ಪ್ರತಿಮೆಯನ್ನು ಸ್ಥಾಪನೆ (Siddaramaiah Statue) ಮಾಡಿದ್ದಾರೆ. 2-3 ವರ್ಷಗಳ ಹಿಂದೆಯೂ ನಗರದಲ್ಲಿ ರಾತ್ರೋ ರಾತ್ರಿ ಸಿದ್ದರಾಮಯ್ಯ ಭಾವಚಿತ್ರದ ಬ್ಯಾನರ್ ಅಳವಡಿಸಿ, ಸಿದ್ದರಾಮಯ್ಯ ಸರ್ಕಲ್ ನಿರ್ಮಾಣ ಮಾಡಿದ್ದರು. ಈಗ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಲಬುರಗಿ ಪ್ರವಾಸದಲ್ಲಿರುವಾಗಲೇ ಮೂರ್ತಿ ಸ್ಥಾಪನೆ ಮಾಡಿದ್ದಾರೆ. ಇದೇ ಮಾರ್ಗದಲ್ಲಿ ಸಿಎಂ ತೆರಳಲಿದ್ದಾರೆ. ಇದನ್ನೂ ಓದಿ: ಮೈಸೂರು ದಸರಾ ಉದ್ಘಾಟನೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನಗೆ ಅವಕಾಶ ನೀಡಿ: ಸಿಎಂಗೆ ಶಾಸಕ ದಿನೇಶ್ ಗೂಳಿಗೌಡ ಮನವಿ
ಮಹಾನಗರ ಪಾಲಿಕೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಸಿದ್ದರಾಮಯ್ಯ ಮೂರ್ತಿ ತೆರವು ಮಾಡಿದ್ದಾರೆ. ಯಾವುದೇ ಅನುಮತಿ ಪಡೆಯದೆ ಪ್ರತಿಷ್ಠಾಪನೆ ಮಾಡಿದ್ದಕ್ಕೆ ತೆರವು ಮಾಡಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಲ್ ಬ್ಯಾನರ್ ಕಟ್ಟುವಾಗಲೂ ಅನುಮತಿ ಪಡೆದಿರಲಿಲ್ಲ. ಇದನ್ನೂ ಓದಿ: ರಾಜ್ಯದ ಬರಪೀಡಿತ ತಾಲೂಕುಗಳ ರೈತರಿಗೆ ರಿಲೀಫ್ – ಈ ವರ್ಷ ಬಲವಂತದ ಸಾಲ ವಸೂಲಾತಿ ಇಲ್ಲ

