ರಿಯಾದ್: ಹಾರ್ಮುಜ್ ಜಲಸಂಧಿಯನ್ನು (Strait of Hormuz) ಬೈಪಾಸ್ ಮಾಡಿ ತೈಲ ಸರಬರಾಜು ಮಾಡುತ್ತಿದ್ದ ಸೌದಿ ಅರೇಬಿಯಾದ ಪೈಪ್ಲೈನ್(Saudi Pipeline Disruption) ಮೇಲೆಯೇ ಡ್ರೋನ್ ದಾಳಿ(Drone Attack) ನಡೆದಿದೆ.
ದಾಳಿಯ ಬೆನ್ನಲ್ಲೇ ತೈಲ ಪೈಪ್ಲೈನ್ ಕಾರ್ಯಾಚರಣೆಯನ್ನು ಸೌದಿ ಅರೇಬಿಯಾ ಸ್ಥಗಿತಗೊಳಿಸಿದ್ದು ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಕೆ ಕಂಡಿವೆ.
ಡಬ್ಲ್ಯುಟಿಐ (WTI) ಮತ್ತು ಬ್ರೆಂಟ್ ಕಚ್ಚಾ ತೈಲ ದರಗಳು ಶೇ. 3ಕ್ಕಿಂತ ಹೆಚ್ಚು ಜಿಗಿದಿದ್ದು, ಬ್ರೆಂಟ್ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ ಸುಮಾರು 108 ಡಾಲರ್ಗೆ ತಲುಪಿದೆ.
ಇರಾಕ್ ಮೂಲದಿಂದ ಬಂದ ಹಲವು ಡ್ರೋನ್ಗಳು ರಿಯಾದ್ ಮತ್ತು ಮದೀನಾ ಪ್ರದೇಶಗಳಲ್ಲಿರುವ ಪೂರ್ವ-ಪಶ್ಚಿಮ ಪೈಪ್ಲೈನ್ ಮೇಲೆ ದಾಳಿ ನಡೆಸಿ ಆಸ್ತಿಪಾಸ್ತಿ ಹಾನಿ ಹಾಗೂ ಕೆಲವರಿಗೆ ಗಾಯ ಉಂಟುಮಾಡಿವೆ ಎಂದು ಸೌದಿ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಇದನ್ನೂ ಓದಿ: ಹೌತಿಗಳ ಮೇಲೆ ಏರ್ಸ್ಟ್ರೈಕ್ ಮಾಡಿ – MBS ಕರೆಯನ್ನು 2 ಬಾರಿ ತಿರಸ್ಕರಿಸಿದ ಟ್ರಂಪ್
Saudi Arabia has shut its East-West oil pipeline after a drone attack. Riyadh says the attack originated in Iraq. The pipeline allowed Riyadh to bypass the Strait of Hormuz. pic.twitter.com/x6mvyl4u7p
— Al Jazeera English (@AJEnglish) September 12, 2026
ಸುರಕ್ಷತಾ ಪರಿಶೀಲನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೈಪ್ಲೈನ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ರಿಯಾದ್ ತಿಳಿಸಿದೆ. ಪ್ರತಿದಿನ 50 ರಿಂದ 70 ಲಕ್ಷ ಬ್ಯಾರೆಲ್ಗಳಷ್ಟು ತೈಲವನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಈ ಪೈಪ್ಲೈನ್, ಅಮೆರಿಕ-ಇರಾನ್ ಸಂಘರ್ಷದಿಂದಾಗಿ ಉಂಟಾಗಿದ್ದ ತೈಲ ಪೂರೈಕೆ ಕೊರತೆಯನ್ನು ಸರಿದೂಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಈ ಪೈಪ್ಲೈನ್ ಸ್ಥಗಿತಗೊಂಡಿರುವುದು ಈಗಾಗಲೇ ಅಸ್ಥಿರವಾಗಿರುವ ಜಾಗತಿಕ ಆರ್ಥಿಕತೆ ಮತ್ತು ತೈಲ ಮಾರುಕಟ್ಟೆಯ ಮೇಲೆ ಹೊಸ ಆರ್ಥಿಕ ಅನಿಶ್ಚಿತತೆಯನ್ನು ತಂದೊಡ್ಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಈ ಪರಿಸ್ಥಿತಿ ಮುಂದುವರಿದರೆ ತೈಲ ಲಭ್ಯತೆ, ಮೂಲಗಳು ಮತ್ತು ವೆಚ್ಚದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಭಾರತೀಯ ತೈಲ ಸಂಸ್ಕರಣಾಗಾರಗಳು (Refiners) ಪರಿಶೀಲನೆ ನಡೆಸುತ್ತಿವೆ.
ಗಲ್ಫ್ ಮೂಲಕ ಹಡಗುಗಳಲ್ಲಿ ತೈಲ ಸಾಗಿಸುವುದಕ್ಕೆ ಪರ್ಯಾಯವಾಗಿ, ಕೆಂಪು ಸಮುದ್ರಕ್ಕೆ ಕಚ್ಚಾ ತೈಲವನ್ನು ತಲುಪಿಸಲು ಸೌದಿಯ ಈಸ್ಟ್-ವೆಸ್ಟ್ ಪೈಪ್ಲೈನ್ ನಿರ್ಣಾಯಕ ಮಾರ್ಗವಾಗಿತ್ತು. ಈ ಸ್ಥಗಿತ ದೀರ್ಘಕಾಲ ಮುಂದುವರಿದರೆ ಪರ್ಯಾಯ ಕಚ್ಚಾ ತೈಲ ಪೂರೈಕೆ ಪಡೆಯುವುದು ಕಷ್ಟಕರ ಹಾಗೂ ದುಬಾರಿಯಾಗಲಿದೆ.

