ಬೀಜಿಂಗ್: ಭಾರತ ಜೂನಿಯರ್ ಹಾಕಿ ತಂಡಗಳು 2026ರ ಎಎಚ್ಎಫ್ ಜೂನಿಯರ್ ಏಷ್ಯಾ ಕಪ್ನಲ್ಲಿ (AHF Junior Asia Cup 2026) ಡಬಲ್ ಧಮಾಕಾ ಮಾಡುವ ಮೂಲಕ ಏಷ್ಯಾದ(Asia) ಕಿರೀಟವನ್ನು ಮುಡಿಗೇರಿಸಿಕೊಂಡಿವೆ. ಚೀನಾದ (China) ಮೊಖಿ ತರಬೇತಿ ಕೇಂದ್ರದಲ್ಲಿ ನಡೆದ ಈ ಟೂರ್ನಿಯಲ್ಲಿ ಪುರುಷರ ಮತ್ತು ಮಹಿಳಾ ತಂಡಗಳೆರಡೂ ಚಾಂಪಿಯನ್ ಆಗಿ ಹೊರಹೊಮ್ಮಿವೆ.
ಮಹಿಳಾ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡವು ಆತಿಥೇಯ ಚೀನಾವನ್ನು 1-0 ಗೋಲುಗಳಿಂದ ಸೋಲಿಸಿ ಸತತ ಮೂರನೇ ಬಾರಿಗೆ (2023, 2024, 2026) ಚಾಂಪಿಯನ್ ಪಟ್ಟ ಅಲಂಕರಿಸಿತು. ಭಾರತದ ಪರ ಸನಿಕಾ ಚಂದ್ರಕಾಂತ್ ಮಾನೆ 17ನೇ ನಿಮಿಷದಲ್ಲಿ ದಾಖಲಿಸಿದ ಏಕೈಕ ಗೋಲು ತಂಡದ ಗೆಲುವಿಗೆ ಕಾರಣವಾಯಿತು.
ಭಾರತದ ಜೂನಿಯರ್ ಪುರುಷರ ಹಾಕಿ ತಂಡವು ಸಹ ಫೈನಲ್ನಲ್ಲಿ ದಕ್ಷಿಣ ಕೊರಿಯಾವನ್ನು 4-1 ಗೋಲುಗಳಿಂದ ಮಣಿಸಿ ಏಷ್ಯಾ ಕಪ್ ಮುಡಿಗೇರಿಸಿಕೊಂಡಿದೆ. ಈ ಮೂಲಕ ಸತತ 4ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
𝗪𝗘 𝗔𝗥𝗘 𝗖𝗛𝗔𝗠𝗣𝗜𝗢𝗡𝗦! 🏆🎉
The Indian Junior Men’s Team lift the AHF Junior Asia Cup 2026 trophy after successfully defending their title! 🏑🔥
Another golden chapter for Indian hockey! 🥇🇮🇳#HockeyIndia #IndiaKaGame #JuniorAsiaCup pic.twitter.com/qvUvAkslpL
— Hockey India (@TheHockeyIndia) September 13, 2026
ಭಾರತದ ಪರ ಅಜೀತ್ ಯಾದವ್ (9ನೇ ನಿಮಿಷ), ಅನ್ಮೋಲ್ ಎಕ್ಕಾ (13ನೇ ನಿಮಿಷ), ಪ್ರಭ್ದೀಪ್ ಸಿಂಗ್ (21ನೇ ನಿಮಿಷ) ಮತ್ತು ಆಶು ಮೌರ್ಯ (50ನೇ ನಿಮಿಷ) ಗೋಲುಗಳನ್ನು ಬಾರಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು. ಕೊರಿಯಾ ಪರ ಲೀ ಮಿನ್ಹ್ಯೋಕ್ ಕೇವಲ ಒಂದು ಗೋಲು ಗಳಿಸಿದರು.
ಈ ಐತಿಹಾಸಿಕ ಗೆಲುವಿನೊಂದಿಗೆ ಉಭಯ ತಂಡಗಳು ಜೂನಿಯರ್ ಹಾಕಿ ವಿಶ್ವಕಪ್ಗೆ ನೇರ ಅರ್ಹತೆ ಪಡೆದುಕೊಂಡಿವೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಮೊಳಗಿದ ‘ವಂದೇ ಮಾತರಂ’
ಭಾರತ ತಂಡವು ನಾಯಕ ಅನ್ಮೋಲ್ ಎಕ್ಕಾ ನೇತೃತ್ವದಲ್ಲಿ ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಅಜೇಯವಾಗಿ ಉಳಿಯಿತು. ಸೆಮಿಫೈನಲ್ನಲ್ಲಿ ಮಲೇಷ್ಯಾವನ್ನು 3-1 ಗೋಲುಗಳಿಂದ ಸೋಲಿಸಿ ಫೈನಲ್ ತಲುಪಿತ್ತು.

