ಮೈಸೂರು: ನಾಡಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಈಗಾಗಲೇ ಮೊದಲ ಹಂತದ ಗಜಪಡೆಯ ಆಗಮನವಾಗಿದ್ದು, ಇದೀಗ ಎರಡನೇ ಹಂತದಲ್ಲಿ 3 ಆನೆಗಳ (Elephants) ಆಗಮನವಾಗಿದೆ.
ಎರಡನೇ ಹಂತದಲ್ಲಿ ಅರಮನೆಗೆ ರೂಪ, ಸುಗ್ರೀವ, ಚೈತ್ರ ಆನೆಗಳ ಆಗಮನವಾಗಿದೆ. ಅರಮನೆ ಮಂಡಳಿ ವತಿಯಿಂದ ಆನೆಗಳಿಗೆ ಸಂಪ್ರದಾಯಿಕ ಪೂಜೆ ಸಲ್ಲಿಕೆ ಮಾಡಿ, ಕಬ್ಬು, ಬೆಲ್ಲ, ತಿಂಡಿ ತಿನಿಸುಗಳನ್ನು ನೀಡಿ ಪೂಜೆ ಸಲ್ಲಿಸಿ ಆನೆಗಳನ್ನು ಬರ ಮಾಡಿಕೊಂಡಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಮೊಳಗಿದ ವಂದೇ ಮಾತರಂ
ರಾಮಪುರ ಶಿಬಿರದಿಂದ ಚೈತ್ರ ಆನೆ, ದುಬಾರೆ ಶಿಬಿರದಿಂದ ಸುಗ್ರೀವ ಆನೆ, ದೊಡ್ಡ ಹರವೆ ಶಿಬಿರದಿಂದ ರೂಪ ಆನೆಯ ಆಗಮನವಾಗಿದೆ. ಮೊದಲ ಹಂತದಲ್ಲಿ 9 ಆನೆಗಳು ಹಾಗೂ ಎರಡನೇ ಹಂತದಲ್ಲಿ 3 ಆನೆಗಳು ಸೇರಿದಂತೆ ಒಟ್ಟು 12 ಆನೆಗಳಿಗೆ ಅರಮನೆ ಆವರಣದಲ್ಲಿ ಆಶ್ರಯ ನೀಡಲಾಗಿದೆ. ಇದನ್ನೂ ಓದಿ: ಗಜೇಂದ್ರಗಡದಲ್ಲಿ ಪಟಾಕಿ ಕಿಡಿ ಸಿಡಿದು ಗೊಡೌನ್ಗೆ ಬೆಂಕಿ; ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿ

