ಪಣಜಿ: 2027 ರಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಗೆ(Goa Election) ಆಮ್ ಆದ್ಮಿ ಪಕ್ಷ (AAP) ಮತ್ತು ಗೋವಾ ಫಾರ್ವರ್ಡ್ ಪಾರ್ಟಿ (GFP) ಭಾನುವಾರ ಚುನಾವಣಾ ಪೂರ್ವ ಮೈತ್ರಿ ಘೋಷಿಸಿದ್ದು, ಈ ಒಕ್ಕೂಟಕ್ಕೆ ಗೋವಾ ಫಸ್ಟ್ (Goa First) ಎಂದು ಹೆಸರಿಡಲಾಗಿದೆ.
ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್(Arvind Kejriwal) ಮತ್ತು ಜಿಎಫ್‌ಪಿ ಅಧ್ಯಕ್ಷ ವಿಜಯ್ ಸರ್ದೇಸಾಯಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ಮೈತ್ರಿಯನ್ನು ಅಧಿಕೃತವಾಗಿ ಪ್ರಕಟಿಸಿದರು. ಈ ಮೂಲಕ ಗೋವಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿದ ಮೂರನೇ ರಾಜಕೀಯ ಪರ್ಯಾಯವನ್ನು ಜನರ ಮುಂದಿಡಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಇಲ್ಲಿಯವರೆಗೆ ಗೋವಾದ ಜನರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಬಿಟ್ಟರೆ ಬೇರೆ ನೈಜ ಆಯ್ಕೆ ಇರಲಿಲ್ಲ. ‘ಗೋವಾ ಫಸ್ಟ್’ ಆ ಕೊರತೆಯನ್ನು ನೀಗಿಸಲಿದ್ದು, ಬಲಿಷ್ಠ ಮತ್ತು ವಿಶ್ವಾಸಾರ್ಹ ಪರ್ಯಾಯವನ್ನು ಒದಗಿಸಲಿದೆ. ಬಿಜೆಪಿಗೆ ಬಹುಮತ ಸಿಗುವ ಸಾಧ್ಯತೆ ಇಲ್ಲ, ಇನ್ನೊಂದೆಡೆ ಗೆದ್ದ ಕಾಂಗ್ರೆಸ್ ಶಾಸಕರು ಮತ್ತೆ ಬಿಜೆಪಿಗೆ ಜಿಗಿಯುವ ಸಾಧ್ಯತೆಯಿದೆ. ಆದ್ದರಿಂದ ನಮ್ಮ ಮೈತ್ರಿಕೂಟ ಸ್ವಂತ ಬಲದ ಮೇಲೆ ಗೆದ್ದು ಗೋವಾದ ಜನರಿಗಾಗಿ ಕೆಲಸ ಮಾಡುವ ಸರ್ಕಾರವನ್ನು ರಚಿಸಲಿದೆ,” ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದರು.
A BJP voter can never vote for Congress. They can vote for our Goa First alliance, but no matter how disillusioned and disgusted they are with BJP, they will never vote for Congress. They hate Congress. pic.twitter.com/mKS4ShsYuW
— Arvind Kejriwal (@ArvindKejriwal) September 13, 2026
ಕೇಜ್ರಿವಾಲ್ ಅವರ ಭೇಟಿಗೂ ಮುನ್ನ ಕಾಂಗ್ರೆಸ್ ಮತ್ತು ಬಿಜೆಪಿ ನಿಮಗೆ ಎರಡು ಬಾರಿ ಮೋಸ ಮಾಡಿವೆ, ಮೂರನೇ ಬಾರಿ ಮೋಸ ಹೋಗಬೇಡಿಎಂಬ ಪೋಸ್ಟರ್‌ಗಳನ್ನು ಹಾಕಲಾಗಿತ್ತು.
ಮುಂಬರುವ 2027ರ ಫೆಬ್ರವರಿ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಸಮಾನಮನಸ್ಕ ಜಾತ್ಯತೀತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಜಿಎಫ್‌ಪಿ ರಾಜ್ಯ ಕಾರ್ಯಕಾರಿಣಿ ಶನಿವಾರ ನಿರ್ಣಯ ಕೈಗೊಂಡಿತ್ತು. ಈ ಹಿಂದೆ ಕಾಂಗ್ರೆಸ್ ಪಕ್ಷವು ಜಿಎಫ್‌ಪಿ ಜೊತೆ ಮೈತ್ರಿ ಮಾತುಕತೆ ನಡೆಸಿತ್ತಾದರೂ, ಆ ಮಾತುಕತೆಗಳು ಹಳ್ಳ ಹಿಡಿದಿದ್ದವು. ವಿಶಾಲ ವಿರೋಧ ಪಕ್ಷಗಳ ಮೈತ್ರಿಕೂಟ ರಚನೆಗೆ ಕಾಂಗ್ರೆಸ್ ವಿಳಂಬ ಮಾಡುತ್ತಿದೆ ಎಂದು ಆಪ್ ಮತ್ತು ಜಿಎಫ್‌ಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭೂಮಿ ಸಮಸ್ಯೆ ಬಗೆಹರಿಸಿಕೊಡಿ: ಪ್ರಧಾನಿ ಮೋದಿಗೆ ಬಾಲ್ಯದ ಗೆಳೆಯ ಮನವಿ
The people of Goa didn’t have a non-BJP, non-Congress option. Our alliance, ‘Goa First’, is the formidable alternative that people have been seeking.
The Goa First alliance is loyal to the people of Goa. We will fight this election and we will win it on our own strength. pic.twitter.com/khfURgSipr
— Arvind Kejriwal (@ArvindKejriwal) September 13, 2026
ಮಾಜಿ ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ಸೇರಿದಂತೆ ಪ್ರಸ್ತುತ 1 ಶಾಸಕರ ಬಲವನ್ನು ಜಿಎಫ್‌ಪಿ ಹೊಂದಿದೆ. ದಕ್ಷಿಣ ಗೋವಾದ ಬೆನೌಲಿಮ್‌ನ ವೆನ್ಜಿ ವೀಗಾಸ್ ಮತ್ತು ವೆಲಿಮ್‌ನ ಕ್ರೂಜ್ ಸಿಲ್ವಾ ಸೇರಿದಂತೆ 2 ಶಾಸಕರನ್ನು ಹೊಂದಿದೆ.
2022ರ ಚುನಾವಣೆಯಲ್ಲಿ 40 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 20 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದಿದ್ದರೂ, ನಂತರ 8 ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡ ಪರಿಣಾಮ ಕಾಂಗ್ರೆಸ್ ಬಲ 3ಕ್ಕೆ ಕುಸಿದಿದೆ. 2019ರಲ್ಲೂ ಕಾಂಗ್ರೆಸ್‌ನ 10 ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

