ನವದೆಹಲಿ: ಐಷಾರಾಮಿ 5-ಸ್ಟಾರ್ ಹೋಟೆಲ್ನಲ್ಲಿ (Five Star Hotel) ವಿಮಾನ ಪೈಲಟ್ (Pilot) ಒಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ದೆಹಲಿಯ (Delhi) ವಸಂತ್ ಕುಂಜ್ನಲ್ಲಿ (Vasant Kunj) ನಡೆದಿದೆ.
ಹೋಟೆಲ್ ದಿ ಗ್ರ್ಯಾಂಡ್ನ ಕೊಠಡಿಯಲ್ಲಿ ಫ್ಲೈಟ್ ಕ್ಯಾಪ್ಟನ್ ಆಗಿದ್ದ ಸನ್ನಿ ಅಸಲ್ದೇಕರ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆಪ್ಟೆಂಬರ್ 10ರಂದು ಸನ್ನಿ ಅಸಲ್ದೇಕರ್ ಅವರು ಹೋಟೆಲ್ಗೆ ಚೆಕ್ಇನ್ ಮಾಡಿದ್ದರು. ಮರುದಿನ ಅವರ ಸಹೋದರ ಹಲವು ಬಾರಿ ಕರೆ ಮಾಡಿದರೂ ಸನ್ನಿ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪೂರ್ಣ ‘ವಂದೇ ಮಾತರಂ’ಗಾಗಿ ಬಿಜೆಪಿ ಪಾದಯಾತ್ರೆ
ಬಳಿಕ ಮ್ಯಾನೇಜರ್ ಸನ್ನಿ ತಂಗಿದ್ದ ಕೊಠಡಿಗೆ ತೆರಳಿದ್ದಾರೆ. ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಹೀಗಾಗಿ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆದಾಗ ಸನ್ನಿ ಅಸಲ್ದೇಕರ್ ಅವರು ಪ್ರಜ್ಞಾಹೀನ ಹಾಗೂ ಯಾವುದೇ ಪ್ರತಿಕ್ರಿಯೆ ನೀಡದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಗಾಜಾ ಮೇಲಿನ ಯುದ್ಧ ಇಸ್ರೇಲ್ ಭಯೋತ್ಪಾದನೆ ಎಂದ ಮಲೇಷ್ಯಾ ಪ್ರಧಾನಿ – ಪಾಕ್ ದಾಳಿ ಬಗ್ಗೆ ಮೌನ
ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: BRICS Summit | ಭಯೋತ್ಪಾದನೆಯನ್ನು ಸಹಿಸಲಾಗದು – ಪಹಲ್ಗಾಮ್ ದಾಳಿಯನ್ನು ಖಂಡಿಸಿದ ಬ್ರಿಕ್ಸ್ ನಾಯಕರು
ಸನ್ನಿ ಅಸಲ್ದೇಕರ್ ಅವರ ಮರಣೋತ್ತರ ಪರೀಕ್ಷೆಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಆದರೆ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದ ಬಳಿಕ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಿಡಬ್ಲ್ಯೂಡಿ ಇಲಾಖೆಯಲ್ಲಿ ಲಂಚ ಪಡೆದು ವಿದೇಶಿ ಹೂಡಿಕೆಗೆ ದಾಖಲೆ ಏನಿದೆ? – ಪ್ರಿಯಾಂಕ್ ಖರ್ಗೆ
ಈ ಸಂಬಂಧ ಪೊಲೀಸರು ಬಿಎನ್ಎಸ್ಎಸ್ ಸೆಕ್ಷನ್ 194 ಅಡಿಯಲ್ಲಿ ಇನ್ಕ್ವೆಸ್ಟ್ ಪ್ರಕ್ರಿಯೆ ಆರಂಭಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಹೊಸನಗರ | ಜಿಂಕೆ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳು ಅರೆಸ್ಟ್

