ಬಳ್ಳಾರಿ: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ಮುಂದಿನ ದಿನ ಉನ್ನತ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಅದಕ್ಕೆ ಇಡಿ ದಾಳಿ ಮಾಡಿದ್ದಾರೆ. ಇದು ರಾಜಕೀಯ ಪ್ರೇರಿತ ದಾಳಿ. ಜನ ಸಾಮಾನ್ಯರು ಸಹಿತ ಇದು ರಾಜಕೀಯದ ದಾಳಿ ಅಂತ ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಬಿ ನಾಗೇಂದ್ರ (B.Nagendra) ಆರೋಪಿಸಿದ್ದಾರೆ.
ಬಳ್ಳಾರಿಯ (Ballari) ರೂಪನಗುಡಿಯಲ್ಲಿ ಮಾತಮಾಡಿದ ಅವರು, ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ನಡೆದ ಇಡಿ ದಾಳಿಯ (ED Raid) ಬಗ್ಗೆ ಪ್ರತಿಕ್ರಿಯಿಸಿದರು. ಈ ವೇಳೆ, ಜಾರಕಿಹೊಳಿ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಹಾಗೂ ಮಂತ್ರಿಗಳು. ರಾಜಕೀಯ ಕಾರಣಕ್ಕೆ ರಾಜಕೀಯ ಪ್ರೇರಿತವಾಗಿ ದಾಳಿ ಮಾಡಲಾಗಿದೆ. ರಾಜ್ಯದಲ್ಲಿರೋ ಬಿಜೆಪಿ (BJP) ನಾಯಕರ ಕೈವಾಡ ಅಂತ ಗ್ರಾಮದ ಜನ ಹೇಳೋ ವಾತಾವರಣ ನಿರ್ಮಾಣವಾಗಿದೆ ಎಂದರು. ಇದನ್ನೂ ಓದಿ: ಮೋದಿಯವ್ರು ಹೊರಗಡೆ ಹೋಗಿ ಹೂಡಿಕೆ ಮಾಡಿ ಅಂತಾರೆ, ಜಾರಕಿಹೊಳಿ ಅದನ್ನೇ ಮಾಡಿದ್ದಾರೆ: ಪ್ರಿಯಾಂಕ್ ಖರ್ಗೆ
ಸಿಬಿಐ ಮೇಲೆ ಬಹಳ ಗೌರವವಿತ್ತು. ಆದರೆ ಈಗ ರಾಜಕೀಯ ಪ್ರೇರಿತ ದಾಳಿ ಮಾಡ್ತಿದ್ದಾರೆ. ಕಾಂಗ್ರೆಸ್‌ಗೆ, ಡಿಕೆಶಿಗೆ ಯಾರು ಬಲ ತುಂಬ್ತಾರೋ ಅವರ ಮೇಲೆ ಇಡಿ ದಾಳಿ ಮಾಡಿಸ್ತಾರೆ. ನನ್ನ ಮೇಲೆ ದಾಳಿ ಆಗಿರೋದನ್ನ ನಮ್ಮ ನಾಯಕರು ಹೇಳ್ತಿದ್ದಾರೆ. ಇನ್ನೂ ಹೆಚ್ಚಿನ ಕಾಂಗ್ರೆಸ್ ನಾಯಕರ ಮೇಲೆ ದಾಳಿ ಆಗುತ್ತೆ. ಇಡಿ, ಸಿಬಿಐ ಕೇಂದ್ರ ಬಿಜೆಪಿಯ ಕೈಗೊಂಬೆಯಾಗಿದೆ. ಇಡೀ ಕಾಂಗ್ರೆಸ್ ಪಕ್ಷ ಸತೀಶ್ ಜಾರಕಿಹೊಳಿ ಪರವಾಗಿದೆ ಎಂದರು.
ಕೊಬ್ಬು ಕರಗಿಸಲು ಬಿಜೆಪಿ ನಾಯಕರ ಪಾದಯಾತ್ರೆ
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿತ್ತು, ಪಾದಯಾತ್ರೆ ಮಾಡಿದ್ದಾರೆ. ಕೊಲೆಸ್ಟ್ರಾಲ್, ಫ್ಯಾಟ್ ಕಡಿಮೆ ಮಾಡಲು ಪಾದಯಾತ್ರೆ ಮಾಡಿದ್ದಾರೆ. ಮನೆಯಲ್ಲಿ ಬಿಜೆಪಿ ನಾಯಕರಿಗೆ ನಡೆಯಲು ಸಮಯವಿರಲಿಲ್ಲ. ಪಾದಯಾತ್ರೆ ಮಾಡಿ ಒಬ್ಬರು 5 ಕೆಜಿ ಕರಗಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.
ಬಿಜೆಪಿ ನಾಯಕರು ವಿಷಯವಿಲ್ಲದೆ ಪಾದಯಾತ್ರೆ ಮಾಡಿದ್ದಾರೆ. ಬಿಜೆಪಿಗೆ ಹೆದರಿ ನಾನು ರಾಜೀನಾಮೆ ನೀಡಿಲ್ಲ. ಪಕ್ಷಕ್ಕೆ ಮುಜುಗರ ಆಗಬಾರದು ಅಂತ ರಾಜೀನಾಮೆ ನೀಡಿದ್ದೇನೆ. ಬಿಜೆಪಿಯಲ್ಲಿನ ಕೆಟ್ಟತನ ತೊಳೆದು ಹಾಕಲು ಪಾದಯಾತ್ರೆ ಮಾಡಿದ್ದಾರೆ. ಪಾದಯಾತ್ರೆ ಸ್ವಾಗತಿಸುವೆ. ಬಿಜೆಪಿಯವರ ಆರೋಗ್ಯಾಯುಷ್ಯ ಚೆನ್ನಾಗಿರಲಿ. 2028 ಕ್ಕೆ ಬಿಜೆಪಿ ಬಲಿಷ್ಠವಾಗಿ ಬರಲಿ. ಅದರ ಡಬಲ್ ನಾವು ಎದುರಿಸುತ್ತೇವೆ. ಬಿಜೆಪಿ ಸವಾಲ್ ಎದುರಿಸಲು ಸರ್ವ ಸನ್ನದ್ದರಾಗಿದ್ದೇವೆ. ಅಖಂಡ ಬಳ್ಳಾರಿಯಲ್ಲಿ ಬಿಜೆಪಿ 10 ಸ್ಥಾನ ಗೆಲ್ತವಿ ಅಂತ ಬಿಜೆಪಿ ನಾಯಕರು ಸವಾಲು ಹಾಕಿದ್ದಾರೆ. ಅವರ ಸವಾಲು ನಾವು ಸ್ವೀಕಾರ ಮಾಡ್ತೀವಿ. ಅಖಂಡ ಬಳ್ಳಾರಿ ಮಾತ್ರ ಅಲ್ಲ, ಇಡೀ ಕರ್ನಾಟದಲ್ಲಿ ನಮ್ಮ ಗೆಲವು ಖಚಿತ ಎಂದರು. ಇದನ್ನೂ ಓದಿ: ಬೇರೆ ಯಾವುದೇ ದೇಶದಲ್ಲಿ ಹೀಗೆ ನಡೆಯೋದಿಲ್ಲ – ಸತೀಶ್ ಜಾರಕಿಹೊಳಿ ಪರ ವಿಜಯ್ ಮಲ್ಯ ಬ್ಯಾಟಿಂಗ್


