ಜಮ್ಮು: ಜಮ್ಮು-ಕಾಶ್ಮೀರದ (Jammu Kashmir) ದೋಡಾ (Doda) ಜಿಲ್ಲೆಯ ಭದ್ರವಾಹ್‌ನ ಸೆವೋಜ್‌ಧಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ (Jaish-e-Mohammed) ಸಂಘಟನೆಯ ಪಾಕಿಸ್ತಾನಿ ಉಗ್ರ ಕಮಾಂಡರ್ ಯಾಸಿರ್ ಹತನಾಗಿದ್ದಾನೆ.
ಸೆವೋಜ್‌ಧಾರ್ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಉಗ್ರನ ಮೃತದೇಹವನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಎಸ್‌ಒಜಿ ದೋಡಾ, ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‌ಪಿಎಫ್ ತಂಡಗಳು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿವೆ. ಇದನ್ನೂ ಓದಿ: ಹಾಸನ | ಕೆಂಚಟ್ಟಹಳ್ಳಿ ಫ್ಲೈ ಓವರ್ ಮೇಲೆ ಪೆಟ್ರೋಲ್ ಟ್ಯಾಂಕರ್ ಪಲ್ಟಿ – ಸಾಲುಗಟ್ಟಿ ನಿಂತ ವಾಹನಗಳು
ಮೃತದೇಹದ ಬಳಿಯಿಂದ ಅಮೆರಿಕ ನಿರ್ಮಿತ ಎಂ4 ರೈಫಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹ ಹಾಗೂ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿರುವ ಭದ್ರತಾ ಪಡೆಗಳು ಮುಂದಿನ ತನಿಖೆ ಆರಂಭಿಸಿವೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ – ಸ್ಪೆಷಲ್ ಡ್ರೈವ್ ನಡೆಸಿ 17 ಬಾಲಕರ ರಕ್ಷಣೆ
ಯಾಸಿರ್‌ನನ್ನು ಸೆಪ್ಟೆಂಬರ್ 5ರಂದು ಮಧ್ಯ ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಅಶ್ದರ್ ಗಲಿ ಪ್ರದೇಶದಲ್ಲಿ ನಡೆದ `ಆಪರೇಷನ್ ಅಶ್ದರ್’ (Operation Ashdar) ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ಸಿಆರ್‌ಪಿಎಫ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು. ಇದನ್ನೂ ಓದಿ: ಮೋದಿಯವ್ರು ಹೊರಗಡೆ ಹೋಗಿ ಹೂಡಿಕೆ ಮಾಡಿ ಅಂತಾರೆ, ಜಾರಕಿಹೊಳಿ ಅದನ್ನೇ ಮಾಡಿದ್ದಾರೆ: ಪ್ರಿಯಾಂಕ್ ಖರ್ಗೆ
ಆ ಕಾರ್ಯಾಚರಣೆಯ ವೇಳೆ ಒಂದು ಎಕೆ ರೈಫಲ್ ಸೇರಿದಂತೆ ಯುದ್ಧೋಪಕರಣಗಳನ್ನೂ ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದವು. ಇದೀಗ ಯಾಸಿರ್‌ನ ಸ್ಥಳೀಯ ಸಂಪರ್ಕಗಳು ಹಾಗೂ ಆತನ ಚಟುವಟಿಕೆಗಳ ಕುರಿತು ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ವಿರುದ್ಧ ಎಡಿಜಿಪಿ ಕಂಪನಿಯಿಂದ ಕಿಕ್‌ಬ್ಯಾಕ್ ಪಡೆದಿರೋ ಆರೋಪ; ED ಸ್ಫೋಟಕ ಮಾಹಿತಿ

