– ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ
– ಅವಘಡ ತಪ್ಪಿಸಲು ಹರಿಯುತ್ತಿರುವ ಪೆಟ್ರೋಲ್‌ಗೆ ನೀರು ಸೇರಿಸುತ್ತಿರೋ ಅಗ್ನಿಶಾಮಕ ಸಿಬ್ಬಂದಿ
ಹಾಸನ: ನಗರದ (Hassan) ಹೊರವಲಯದಲ್ಲಿರುವ ಕೆಂಚಟ್ಟಹಳ್ಳಿ ಬಳಿಯ ಫ್ಲೈಓವರ್ (Kenchattahalli Flyover) ಮೇಲೆ ಪೆಟ್ರೋಲ್ (Petrol) ತುಂಬಿದ್ದ ಟ್ಯಾಂಕರ್ ಉರುಳಿ ಬಿದ್ದಿದೆ. ಪೆಟ್ರೋಲ್ ಹರಿದು ಹೋಗುತ್ತಿದ್ದು, ರಸ್ತೆಯಲ್ಲಿ ಸಂಚಾರ ಬಂದ್ ಮಾಡಲಾಗಿದೆ.
ಪೆಟ್ರೋಲ್ ಹರಿದು ಹೋಗುತ್ತಿದ್ದು, ಬಿಸಿಲು ಹೆಚ್ಚಾಗಿರುವುದರಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯಿದೆ. ವೀಕೆಂಡ್, ಗೌರಿ – ಗಣೇಶ ಹಬ್ಬ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತ – ಸ್ಪೆಷಲ್ ಡ್ರೈವ್ ನಡೆಸಿ 17 ಬಾಲಕರ ರಕ್ಷಣೆ
ಸ್ಥಳಕ್ಕೆ ಪೊಲೀಸರು ಅಗ್ನಿಶಾಮಕದಳದ ಸಿಬ್ಬಂದಿ ದೌಡಾಯಿಸಿದ್ದು ಪೆಟ್ರೋಲ್ ಮೇಲೆ ನೀರು ಹಾಕುತ್ತಿದ್ದಾರೆ. ಸೋರುತ್ತಿರುವ ಪೆಟ್ರೋಲ್‌ನ್ನು ನಿಯಂತ್ರಣಕ್ಕೆ ತರುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಕೊಂಡಿದ್ದಾರೆ. ಫ್ಲೈಓವರ್ ಮೇಲೆ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ.
ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ವಾಹನ ಸವಾರರು ಪರದಾಡುತ್ತಿದ್ದಾರೆ. ಟ್ರಾಫಿಕ್ ನಿಯಂತ್ರಿಸಲು ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ತಮಿಳುನಾಡಿನಿಂದ ಹಾಸನದ ಹೆಚ್‌ಪಿಸಿಎಲ್‌ಗೆ ಟ್ಯಾಂಕರ್ ಬರುತ್ತಿತ್ತು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಸಾಲು ಸಾಲು ರಜೆ – ಊರಿನತ್ತ ಜನರ ದಂಡು; ನವಯುಗ ಟೋಲ್ ಬಳಿ ಟ್ರಾಫಿಕ್ ಜಾಮ್

